_1788113345949.webp?w=480&auto=format%2Ccompress&fit=max)
_1788113345949.webp?w=480&auto=format%2Ccompress&fit=max)
ಇಂಡೋನೇಷ್ಯಾದಲ್ಲಿ ಭ್ರಷ್ಟಾಚಾರ ಮತ್ತು ಸರ್ಕಾರದ ನೀತಿಗಳ ವಿರುದ್ಧ ಜೆನ್ಜೀ ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನಾಕಾರರು ಸಂಸತ್ತಿನ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪೊಲೀಸ್ ಚೌಕಿಯೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಹದಿನೆಂಟು ವರ್ಷಗಳಿಂದ ಬಾಕಿ ಉಳಿದಿರುವ ಭ್ರಷ್ಟಾಚಾರ ವಿರೋಧಿ ವಿಧೇಯಕವನ್ನು ಸರ್ಕಾರ ಅಂಗೀಕರಿಸಬೇಕು, ಅಕ್ರಮವಾಗಿ ಸಂಪಾದಿಸಿದ ಆಸ್ತಿಯನ್ನು ಸರ್ಕಾರ ಜಪ್ತಿ ಮಾಡಲು ಇದರಿಂದ ಸಾಧ್ಯವಾಗುತ್ತದೆ ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಇದೇ ಮಸೂದೆಯನ್ನು ಅಂಗೀಕರಿಸಲು ಆಗ್ರಹಿಸಿ 2025ರ ಆಗಸ್ಟ್ನಲ್ಲಿಯೂ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಜನಸಾಮಾನ್ಯರ ಮೇಲೆ ತೆರಿಗೆ ಮತ್ತು ಆರ್ಥಿಕ ಹೊರೆ ಹೆಚ್ಚುತ್ತಿರುವ ನಡುವೆ, ಸಂಸದರು ಮತ್ತು ಉನ್ನತ ವರ್ಗದವರಿಗೆ ನೀಡಲಾಗುತ್ತಿರುವ ಅತಿಯಾದ ಸವಲತ್ತುಗಳ ವಿರುದ್ಧ ಹಾಗೂ ಪೊಲೀಸ್ ದೌರ್ಜನ್ಯದ ವಿರುದ್ಧ ಜನಸಾಮಾನ್ಯರು, ಯುವಜನರು ಮತ್ತು ಕಾರ್ಮಿಕರು ಜಕಾರ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಜಂಟಿ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಈ ವಿದ್ಯಮಾನ ಕುರಿತಾದ ವಿವರ ಇಲ್ಲಿದೆ.