ಆಗಸ್ಟ್​ 24ರವರೆಗೆ ಯುಎಇಗೆ ಈ ಏರ್​​ಲೈನ್ಸ್​ನ ವಿಮಾನಗಳಿಗೆ ಪ್ರವೇಶವಿಲ್ಲ

indigo
Published on

ನವದೆಹಲಿ: ಭಾರತದ ಇಂಡಿಗೋ ಏರ್​ಲೈನ್ಸ್​​ನ ಯುನೈಟೆಡ್​ ಅರಬ್​ ಎಮೆರೆಟ್ಸ್​(ಯುಎಇ) ವಿಮಾನಯಾನಗಳನ್ನು ಆಗಸ್ಟ್​ 24 ರವರೆಗೆ ನಿಷೇಧಿಸಲಾಗಿದೆ. ಯಾತ್ರಿಕರಿಗೆ ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಮಾಡಬೇಕಾದ ಕರೊನಾ ಪರೀಕ್ಷೆಗಳನ್ನು ನಡೆಸದೆ ಪ್ರಯಾಣಕ್ಕೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

ಭಾರತ, ಪಾಕಿಸ್ತಾನ, ನೇಪಾಳ, ಶ್ರೀಲಂಕ ಮತ್ತು ಉಗಾಂಡದಿಂದ ಯುಎಇಗೆ ತೆರಳುವ ಯಾತ್ರಿಕರಿಗೆ ಕರೊನಾ ಆರ್​ಟಿಪಿಸಿಆರ್​ ಪರೀಕ್ಷೆಯಲ್ಲಿ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ. ವಿಮಾನ ಪ್ರಯಾಣಕ್ಕೆ 48 ಗಂಟೆಗಳ ಮುಂಚೆ ಮತ್ತು ವಿಮಾನ ನಿಲ್ದಾಣದಲ್ಲಿ ಕೆಲವು ಗಂಟೆಗಳ ಮುನ್ನ ಕರೊನಾ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿರುತ್ತದೆ ಎನ್ನಲಾಗಿದೆ.

ಮಂಗಳವಾರದಿಂದ ಆಗಸ್ಟ್​ 24 ರವರೆಗೆ ಒಂದು ವಾರದ ಕಾಲ ಯುಎಇಗೆ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿರುವ ಇಂಡಿಗೋ ಸಂಸ್ಥೆ, ಈ ದಿನಾಂಕಗಳಂದು ಫ್ಲೈಟ್​ ಬುಕ್​ ಆಗಿದ್ದು, ತೊಂದರೆಗೊಳಗಾಗುವ ಪ್ರಯಾಣಿಕರಿಗೆ ರೀಫಂಡ್​ ಅಥವಾ ಮುಂದಿನ ದಿನಾಂಕಗಳಲ್ಲಿ ಪ್ರಯಾಣ ವ್ಯವಸ್ಥೆಯನ್ನು ಒದಗಿಸುವುದಾಗಿ ಹೇಳಿದೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net