

Flight: ಇಂದೋರ್ನಿಂದ ಭುವನೇಶ್ವರಕ್ಕೆ 140 ಜನರನ್ನು ಹೊತ್ತೊಯ್ಯುತ್ತಿದ್ದ ಇಂಡಿಗೊ ವಿಮಾನದಲ್ಲಿ ಸೋಮವಾರ (ಜೂ.23) ಬೆಳಿಗ್ಗೆ ಸಣ್ಣ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಬೆಳಿಗ್ಗೆ 9 ಗಂಟೆಗೆ ಹೊರಡಬೇಕಿದ್ದ ವಿಮಾನ ಸುಮಾರು 1 ಗಂಟೆ ತಡವಾಗಿ ಹೊರಟಿತು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ಹೇಳಿದ್ದಾರೆ.
'6E 6332' ಇಂಡಿಗೋ ವಿಮಾನವು ಟೇಕ್-ಆಫ್‌ಗಾಗಿ ರನ್‌ವೇ ಕಡೆಗೆ ಸಾಗುತ್ತಿದ್ದಾಗ ತಾಂತ್ರಿಕ ದೋಷವನ್ನು ಪೈಲಟ್‌ಗಳು ಗಮನಿಸಿದರು ಎಂದು ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣದ ನಿರ್ದೇಶಕಿ ವಿಪಿನ್ ಕಾಂತ್ ಸೇಠ್ ಪಿಟಿಐಗೆ ತಿಳಿಸಿದ್ದಾರೆ.
ನಂತರ ವಿಮಾನವನ್ನು ಮತ್ತೆ ಏಪ್ರನ್‌ಗೆ ತರಲಾಯಿತು. "ಸಣ್ಣ ತಾಂತ್ರಿಕ ದೋಷ"ವನ್ನು ಸರಿಪಡಿಸಿದ ನಂತರ, ವಿಮಾನವು ಮತ್ತೆ ಹೊರಟಿತು ಎಂದು ಹೇಳಿದ್ದಾರೆ.
ಇಂಡಿಗೋದ ಇಂದೋರ್-ಭುವನೇಶ್ವರ ವಿಮಾನ ಸೋಮವಾರ ಬೆಳಿಗ್ಗೆ 9 ಗಂಟೆಗೆ ಹೊರಡಬೇಕಿತ್ತು ಆದರೆ ಅಗತ್ಯ ದುರಸ್ತಿಯ ನಂತರ ಬೆಳಿಗ್ಗೆ 10.16 ಕ್ಕೆ ಹೊರಡಬಹುದು ಎಂದು ವಿಮಾನ ನಿಲ್ದಾಣದ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಏಪ್ರನ್ ಎಂಬುದು ವಿಮಾನ ನಿಲ್ದಾಣದ ಒಂದು ಭಾಗವಾಗಿದ್ದು, ಅಲ್ಲಿ ವಿಮಾನಗಳನ್ನು ನಿಲ್ಲಿಸಲಾಗುತ್ತದೆ, ಇಂಧನ ತುಂಬಿಸಲಾಗುತ್ತದೆ, ನಿರ್ವಹಿಸಲಾಗುತ್ತದೆ ಮತ್ತು ಪ್ರಯಾಣಿಕರನ್ನು ಹತ್ತಲಾಗುತ್ತದೆ ಅಥವಾ ಇಳಿಸಲಾಗುತ್ತದೆ. (ಏಜೆನ್ಸೀಸ್)