

CDS Anil Chauhan: ಸುದರ್ಶನ ಚಕ್ರ ಮಿಷನ್ ಆಡಿಯಲ್ಲಿ ರಕ್ಷಣಾ ವ್ಯವಸ್ಥೆಯು ಕ್ಷಿಪಣಿಗಳು ಮತ್ತು ಕಣ್ಗಾವಲು ವ್ಯವಸ್ಥೆಗಳಂತಹ ಪ್ರಮುಖ ಮೂರು ಸೇನೆಗಳ ಮಿಲಿಟರಿ ಸ್ವತ್ತುಗಳನ್ನು ಒಳಗೊಂಡಿರುವ ಬಲಿಷ್ಠ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತದೆ ಎಂದು ಮೂರು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ.
ಈ ಬಗ್ಗೆ ಮಧ್ಯಪ್ರದೇಶದ ಮಹೌದಲ್ಲಿರುವ ಪ್ರತಿಷ್ಠಿತ ಸೇನಾ ಯುದ್ಧ ಕಾಲೇಜಿನಲ್ಲಿ ನಡೆಯುತ್ತಿರುವ ಉನ್ನತ ಮಿಲಿಟರಿ ಸಮಾವೇಶವಾದ ರಣ ಸಂವಾದ್ನಲ್ಲಿ ಮಾತನಾಡಿದ ಚೌಹಾನ್, ಸುದರ್ಶನ ಚಕ್ರವು ಇಸ್ರೇಲ್ನ ಐರನ್ ಡೋಮ್ ವಾಯು ರಕ್ಷಣಾ ವ್ಯವಸ್ಥೆಯ ಮಾದರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಚೌಹಾಣ್, ಸೇನೆಯು ನೆಲ, ವಾಯು, ಸಮುದ್ರ, ಸಾಗರದೊಳಗಿನ ಮತ್ತು ಬಾಹ್ಯಾಕಾಶಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ, ಸುದರ್ಶನ ಚಕ್ರ ಯೋಜನೆಗಾಗಿ ವಿವಿಧ ವ್ಯವಸ್ಥೆಗಳನ್ನು ಸಂಯೋಜಿಸಲು ಮೂರು ಸೇವೆಗಳಿಂದ ಭಾರಿ ಪ್ರಮಾಣದ ಪ್ರಯತ್ನಗಳು ಬೇಕಾಗುತ್ತವೆ ಎಂದು ಹೇಳಿದ್ದಾರೆ.
ಇದಕ್ಕೆ ಅಗಾಧ ಪ್ರಮಾಣದ ಏಕೀಕರಣದ ಅಗತ್ಯವಿರುತ್ತದೆ ಮತ್ತು ನಿಜವಾದ ಗಡಿ ಚಿತ್ರಣವನ್ನು ಒದಗಿಸಲು ಬಹು ಕ್ಷೇತ್ರಗಳನ್ನು ನೆಟ್ವರ್ಕ್ ಮಾಡಬೇಕಾಗುತ್ತದೆ. ಈ ಯೋಜನೆಯು ಕೃತಕ ಬುದ್ಧಿಮತ್ತೆ, ಸುಧಾರಿತ ಕಂಪ್ಯೂಟೇಶನ್, ಡೇಟಾ ವಿಶ್ಲೇಷಣೆ, ಆಳವಾದ ಡೇಟಾ, ಮತ್ತು ಕ್ವಾಂಟಮ್ ತಂತ್ರಜ್ಞಾನದ ಬಳಕೆಯನ್ನು ಸಹ ಒಳಗೊಂಡಿರುತ್ತದೆ ಎಂದು ಜನರಲ್ ಚೌಹಾಣ್ ಸಲಹೆ ನೀಡಿದರು.
ಭಾರತದ ಪ್ರಮುಖ ಮಿಲಿಟರಿ ಮತ್ತು ನಾಗರಿಕನ್ನು ರಕ್ಷಿಸಲು ಮತ್ತು ಯಾವುದೇ ಶತ್ರು ಬೆದರಿಕೆಗೆ ನಿರ್ಣಾಯಕ ಪ್ರತಿಕ್ರಿಯೆ ನೀಡಲು ಸ್ಥಳೀಯ ವಾಯು ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 15 ರಂದು ಘೋಷಿಸಿದರು. ಪಾಕಿಸ್ತಾನ ಮತ್ತು ಚೀನಾದಿಂದ ಹೊರಹೊಮ್ಮುವ ಭದ್ರತಾ ಸವಾಲುಗಳ ನಡುವೆ ಈ ಕ್ರಮ ಕೈಗೊಳ್ಳಲಾಗಿದೆ.(ಏಜೆನ್ಸೀಸ್)