

ನವದೆಹಲಿ: ಭಾರತದ ಅರ್ಥವ್ಯವಸ್ಥೆ ಚೇತರಿಕೆಯ ಹಾದಿಯಲ್ಲಿದೆ. 2021-22ನೇ ಸಾಲಿನ ಎರಡನೇ ತ್ರೖೆಮಾಸಿಕದ (ಜುಲೈ-ಸೆಪ್ಟೆಂಬರ್) ಜಿಡಿಪಿ ಬೆಳವಣಿಗೆ ಶೇ. 8.4 ಏರಿಕೆ ಕಂಡಿದೆ. ಇದು ದೇಶದ ಅರ್ಥ ವ್ಯವಸ್ಥೆ ಕೋವಿಡ್ ಪೂರ್ವದ ಸ್ಥಿತಿಯನ್ನು ಮೀರಿದ ಬೆಳವಣಿಗೆ ದಾಖಲಿಸಿದೆ.
ಏಪ್ರಿಲ್-ಜೂನ್ ಅವಧಿಯ ಮೊದಲ ತ್ರೖೆಮಾಸಿಕದಲ್ಲಿ ಜಿಡಿಪಿ ಶೇಕಡ 20.1 ಇತ್ತು. ಕಳೆದ ವರ್ಷ ಏಪ್ರಿಲ್-ಜೂನ್ ಅವಧಿಯಲ್ಲಿ ಇದು ಶೇಕಡ 24.4ರಷ್ಟು ಕುಸಿದಿತ್ತು. 2020-21ನೇ ಸಾಲಿನ ಜುಲೈ -ಸೆಪ್ಟೆಂಬರ್ನ ಜಿಡಿಪಿ ಕೂಡ 7.4ರಷ್ಟು ಕುಸಿತ ಕಂಡಿತ್ತು. ಕೋವಿಡ್ ಸೋಂಕು ತಡೆಗೆ ಸರ್ಕಾರ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಿಸಿದ್ದರ ಪರಿಣಾಮ ಹೀಗಾಗಿತ್ತು.
ಮೌಲ್ಯದ ಲೆಕ್ಕಾಚಾರದಲ್ಲಿ ಹೇಳುವುದಾದರೆ ಜಿಡಿಪಿ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 35,73,451 ಕೋಟಿ ರೂಪಾಯಿ ಆಗಿದೆ. 2019-20ನೇ ಸಾಲಿನ ಇದೇ ಅವಧಿಯಲ್ಲಿ 35,61,530 ಕೋಟಿ ರೂಪಾಯಿ ಇತ್ತು. ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್ಡೌನ್ ಆದ ಕಾರಣ ಜುಲೈ-ಸೆಪ್ಟೆಂಬರ್ನಲ್ಲಿಲ ಇದು 32,96,718 ಕೋಟಿ ರೂ.ಗೆ ಕುಸಿದಿತ್ತು.
ಚೀನಾ ಜಿಡಿಪಿ 4.9%: ಜಗತ್ತಿನ ಮುಂಚೂಣಿ ರಾಷ್ಟ್ರಗಳಲ್ಲಿ ಒಂದಾದ ಚೀನಾದಲ್ಲಿ 2021ರ ಜುಲೈ -ಸೆಪ್ಟೆಂಬರ್ ಅವಧಿಯ ಜಿಡಿಪಿ ಶೇಕಡ 4.9 ದಾಖಲಾಗಿತ್ತು.
ನಿರುದ್ಯೋಗ ದರ 9.3%: ಪ್ರಸಕ್ತ ವರ್ಷದ ಜನವರಿ-ಮಾರ್ಚ್ ಅವಧಿಯ ನಿರುದ್ಯೋಗ ದರ ಶೇಕಡ 9.3 ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇಕಡ 9.1 ಇತ್ತು ಎಂದು ನ್ಯಾಷನಲ್ ಸ್ಟಾಟಿಸ್ಟಿಕಲ್ ಆಫೀಸ್ ಡೇಟಾ ಹೇಳಿದೆ.
ನವದೆಹಲಿ: ದೇಶದಲ್ಲಿ 5ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದ ಚರ್ಚಾ ಪತ್ರವನ್ನು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಮಂಗಳವಾರ ಬಿಡುಗಡೆ ಮಾಡಿದೆ. ‘ಆಕ್ಷನ್ ಆಫ್ ಸ್ಪೆಕ್ಟ್ರಂ ಇನ್ ದ ಫ್ರೀಕ್ವೆನ್ಸೀಸ್ ಐಡೆಂಟಿಫೈಡ್ ಫಾರ್ ಇಂಟರ್ ನ್ಯಾಷನಲ್ ಮೊಬೈಲ್ ಟೆಲಿಕಮ್ಯೂನಿಕೇಶನ್ಸ್/5ಜಿ’ ಎಂಬ ಶೀರ್ಷಿಕೆಯಡಿ ಇದನ್ನು ಪ್ರಕಟಿಸಲಾಗಿದೆ. ಇದರಲ್ಲಿ ತರಂಗಾಂತರಗಳ ದರ ನಿಗದಿ, ಹರಾಜು ನಿಯಮಗಳ ವಿಚಾರ ರ್ಚಚಿಸಲಾಗಿದೆ.
ಎಫ್ಎಂಸಿಜಿ ಬಳಕೆ ಕುಸಿತ: ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್ (ಎಫ್ಎಂಸಿಜಿ) ಬಳಕೆಯು ಜುಲೈ- ಸೆಪ್ಟೆಂಬರ್ ಅವಧಿಯಲ್ಲಿ ಶೇ.13 ಕುಸಿತ ಕಂಡಿದೆ ಎಂದು ನೀಲ್ಸನ್ ಸಮೀಕ್ಷಾ ವರದಿ ತಿಳಿಸಿದೆ.