ಭಾರತ ದೇಶದ ಅಭ್ಯುದಯ ಮುಖ್ಯ

2-ಎಸ್ಕೆಪಿ-1-ಗಾಂಧಿ-ಜಯಂತಿ
ಶಿಕಾರಿಪುರ ತಹಸೀಲ್ದಾರ್ ಕಚೇರಿಯಲ್ಲಿ ಏರ್ಪಡಿಸಿದ್ದ ಗಾಂಧಿ ಜಯಂತಿಯಲ್ಲಿ ತಹಸೀಲ್ದಾರ್ ಮಲ್ಲೇಶ್ ಪೂಜಾರ್, ರಂಜಿತ್, ವಿನಯ್ ಆರಾಧ್ಯ, ರವಿಕುಮಾರ್, ಬಸಮ್ಮ ಇತರರಿದ್ದರು.
Published on

ಶಿಕಾರಿಪುರ: ಮಹಾತ್ಮರ ಬದುಕು ನಮಗೆ ಸದಾ ಆದರ್ಶವಾಗಬೇಕು. ಶಾಂತಿ ಮಂತ್ರದಿಂದ ಹೋರಾಟ ನಡೆಸಿದ ಮಹಾನ್ ಚೇತನ ಮಹಾತ್ಮ ಗಾಂಧಿ ಎಂದು ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಹೇಳಿದರು.

ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರೃ ಹೋರಾಟಗಾರರ ಶ್ರಮದಿಂದ ನಾವು ಉತ್ತಮ ಜೀವನ ನಡೆಸುತ್ತಿದ್ದೇವೆ. ನೂರಾರು ವರ್ಷಗಳ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರೃ ಲಭಿಸಿತು ಎಂದು ತಿಳಿಸಿದರು.

ಲಾಲ್ ಬಹದೂರ್ ಶಾಸ್ತ್ರಿ ಅವರು ದೇಶ ಕಂಡ ಸರಳ ಮತ್ತು ಸಜ್ಜನಿಕೆಯ ಅಪರೂಪದ ರಾಜಕಾರಣಿ. ಅವರ ದೇಶಭಕ್ತಿ, ಸಮರ್ಥ ಆಡಳಿತ ದೇಶದ ಜನತೆ ಮನಸು ಗೆದ್ದಿತ್ತು ಎಂದು ಬಣ್ಣಿಸಿದರು. ಗ್ರೇಡ್-2 ತಹಸೀಲ್ದಾರ್ ರಂಜಿತ್, ಉಪತಹಸೀಲ್ದಾರ್ ವಿನಯ್ ಆರಾಧ್ಯ, ಶಿರಸ್ತೇದಾರ್ ರವಿಕುಮಾರ್, ರಾಜಸ್ವ ನಿರೀಕ್ಷಕಿ ಬಸಮ್ಮ, ರಾಜೇಶ್, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net