

ನವದೆಹಲಿ: ದೇಶದಲ್ಲಿ ಕಳೆದ 24ಗಂಟೆಯಲ್ಲಿ 24,248 ಕರೊನಾ ಕೇಸ್ಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 7 ಲಕ್ಷದ ಸಮೀಪ ಬಂದಿದೆ. ಭಾರತದ ಕರೊನಾ ಸೋಂಕಿತರ ಸಂಖ್ಯೆ ಸದ್ಯ 6,97, 413ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಸದ್ಯ ದೇಶದಲ್ಲಿ ಸಕ್ರಿಯ ಕರೊನಾ ಪ್ರಕರಣಗಳ ಸಂಖ್ಯೆ 2,53,287 ಇದ್ದು, 4,24432 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಹಾಗೇ ಕಳೆದ 24 ಗಂಟೆಯಲ್ಲಿ 425 ಮಂದಿ ಸಾವನ್ನಪ್ಪಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ 19, 693ಕ್ಕೆ ಏರಿದೆ.
ಈ ಮಧ್ಯೆ ಕರೊನಾ ನಿಯಂತ್ರಣಕ್ಕೆ ದೇಶಾದ್ಯಂತ ಹಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದ ಪಾಸಿಟಿವಿಟಿ ದರ ಶೇ.6.73ರಷ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.