ಲಾಕ್​ಡೌನ್​ಗೆ ಹೇಳಿ ಧನ್ಯವಾದಗಳು! ಇಳಿಮುಖವಾಗುತ್ತಿದೆ ಕರೊನಾ ವೈರಸ್​ ಸೋಂಕು ಹರಡುವ ಪ್ರಮಾಣ

corona1
Published on

ಬೆಂಗಳೂರು/ನವದೆಹಲಿ: ಕೆಲದಿನಗಳಿಂದ ಭಾರತದಲ್ಲಿ ಕರೊನಾ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಚೆನ್ನೈನ ಗಣಿತ ವಿಜ್ಞಾನ ಸಂಸ್ಥೆಯ (ಇನ್​ಸ್ಟಿಟ್ಯೂಟ್​ ಆಫ್​ ಮ್ಯಾಥಮೆಟಿಕಲ್​ ಸೈನ್ಸ್​ಸ್​-ಐಎಂಎಸ್​) ತಜ್ಞರು ಈ ಸಂತಸದ ವಿಷಯವನ್ನು ತಿಳಿಸಿದ್ದಾರೆ.

ಸಾಮಾನ್ಯವಾಗಿ ಯಾವುದೇ ಸೋಂಕು ಹರಡುವಿಕೆಯನ್ನು ಆರ್​ ನಾಟ್​ ಅಥವಾ ಆರ್​0 ಎಂದು ಕರೆಯಲಾಗುವ ಮಾಪನದ ಮೂಲಕ ಅಳೆಯಲಾಗುತ್ತದೆ. ಏಪ್ರಿಲ್​ 6ರಂದು 1.83 ಇದ್ದ ಆರ್​0 ಇದೀಗ 1.55ಕ್ಕೆ ಕಡಿಮೆಯಾಗಿದೆ. ಲಾಕ್​ಡೌನ್​ ಘೋಷಣೆಗೂ ಮುನ್ನ ಮಾರ್ಚ್​ 23ರಂದು ಆರ್​0 ಪ್ರಮಾಣ 4 ಇತ್ತು. ಅಂದರೆ ಸೋಂಕು ಇಲ್ಲದವರ ಗುಂಪಿನಲ್ಲಿ ಒಬ್ಬ ಸೋಂಕಿತನನ್ನು ನಿಲ್ಲಿಸಿದ್ದರೆ ಆತನಿಂದ ನಾಲ್ವರಿಗೆ ಸೋಂಕು ಹರಡುತ್ತಿತ್ತು.

ಇದನ್ನು ಮನಗಂಡ ಕೇಂದ್ರ ಸರ್ಕಾರ ಮಾ.25ರಿಂದ ದೇಶಾದ್ಯಂತ ಲಾಕ್​ಡೌನ್​ ಘೋಷಿಸಿ, ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತು. ಸೋಂಕಿನ ಪ್ರಮಾಣ ಇಳಿಯಲು ಇದು ಕಾರಣ ಎಂದು ತಜ್ಞರು ಹೇಳಿದ್ದಾರೆ.

ಏಪ್ರಿಲ್​ 13ರ ಮಾಹಿತಿ ಪ್ರಕಾರ ರಾಷ್ಟ್ರದಲ್ಲಿ 8,048 ಸೋಂಕಿತರು ಇದ್ದರು. ಇವರಲ್ಲಿ 324 ಜನ ಮೃತಪಟ್ಟಿದ್ದರು. ಆದರೆ ಈಗ ಜನ ಸೋಂಕಿಗೆ ಒಳಗಾಗುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net