ವಿದೇಶಿ ಡಿಗ್ರಿಗೆ ಭಾರತೀಯರ ಒಲವು

Student
Published on

ವಿದೇಶ ವ್ಯಾಸಂಗ ಕುರಿತು ಭಾರತೀಯರ ಒಲವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. 2017ರಲ್ಲಿ 75 ರಾಷ್ಟ್ರಗಳಲ್ಲಿ 4.5 ಲಕ್ಷ ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. 2022ರಲ್ಲಿ 79 ರಾಷ್ಟ್ರಗಳಲ್ಲಿ 13.2 ಲಕ್ಷ ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಸೇರ್ಪಡೆಯಾಗಿರುವುದನ್ನು ಭಾರತದ ವಿದೇಶಾಂಗ ಸಚಿವಾಲಯದ ದತ್ತಾಂಶ ಬಹಿರಂಗಪಡಿಸಿದೆ.

# ಭಾರತದ ವಿದ್ಯಾರ್ಥಿಗಳು ಅಮೆರಿಕ ವಿವಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸೇರುತ್ತಿದ್ದಾರೆ. 2017ರಲ್ಲಿ 2ನೇ ಸ್ಥಾನದಲ್ಲಿದ್ದ ಆಸ್ಟ್ರೆಲಿಯಾ 2022ರಲ್ಲಿ 4ನೇ ಸ್ಥಾನಕ್ಕೆ ತಲುಪಿದೆ. ಕೆನಡಾ 3ನೇ ಸ್ಥಾನದಿಂದ 2ನೇ ಸ್ಥಾನಕ್ಕೇರಿದೆ.

# ಪಾಕಿಸ್ತಾನದಲ್ಲಿ ವ್ಯಾಸಂಗ ಮಾಡಿದವರಿಗೆ ಭಾರತದಲ್ಲಿ ಉದ್ಯೋಗಕ್ಕೆ ಮತ್ತು ಉನ್ನತ ಶಿಕ್ಷಣಕ್ಕೆ ಅವಕಾಶವಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಸ್ಪಷ್ಟಪಡಿಸಿದೆ. ಪಾಕಿಸ್ತಾನದಲ್ಲಿ ಭಾರತದ 230 ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಸೇರ್ಪಡೆಯಾಗಿದ್ದರು.

# ವ್ಯಾಸಂಗ ಮಾಡಿದ ದೇಶಗಳಲ್ಲೇ ಉದ್ಯೋ ಗಕ್ಕೂ ಭಾರತೀಯರು ತೆರಳುತ್ತಾರೆ ಎಂದೇನೂ ಇಲ್ಲ. ಪ್ರತಿ ವರ್ಷ ವ್ಯಾಸಂಗ ಮತ್ತು ಉದ್ಯೋಗಕ್ಕೆ ಭಾರತೀಯರು ಆಯ್ಕೆ ಮಾಡುವ ದೇಶಗಳು ಬದಲಾಗುತ್ತವೆ.

ಚೀನಾದಲ್ಲಿ 2017ರ ಡೇಟಾ ಪ್ರಕಾರ 17,000 ಭಾರತೀಯ ವಿದ್ಯಾರ್ಥಿಗಳಿದ್ದರು. ಕೋವಿಡ್​ ಸಂಕಷ್ಟದ ಬಳಿಕ ಭಾರತೀಯ ವಿದ್ಯಾರ್ಥಿಗಳಿಗೆ ವ್ಯಾಸಂಗ ಮುಂದುವರಿಸಲು ಕಷ್ಟವಾಗಿತ್ತು. 2022ರ ಡೇಟಾ ಪ್ರಕಾರ ಚೀನಾಕ್ಕೆ ವ್ಯಾಸಂಗಕ್ಕೆ ತೆರಳುವ ಭಾರತೀಯರ ಸಂಖ್ಯೆ 6,500ಕ್ಕೆ ಕುಸಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net