

ಟ್ವಿಟರ್ ಕಂಪನಿಯ ಸಿಇಒ ಸ್ಥಾನಕ್ಕೆ ಜಾಕ್ ಡೋರ್ಸೆ ರಾಜೀನಾಮೆ ನೀಡಿದ ಬೆನ್ನಲ್ಲೇ ಆ ಸ್ಥಾನಕ್ಕೆ ಭಾರತ ಮೂಲದ ಪರಾಗ್ ಅಗರವಾಲ್ ನೇಮಕವಾಗಿದ್ದಾರೆ. ಟ್ವಿಟರ್ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ 20 ಮಿಲಿಯನ್ ಡಾಲರ್. ಇತ್ತೀಚಿನ ದಿನಗಳಲ್ಲಿ ಹಲವು ವಿವಾದಕ್ಕೆ ಈಡಾಗಿರುವ, ಕೆಲ ನೀತಿಗಳನ್ನು ಬದಲಿಸಿಕೊಂಡಿ ರುವ ಟ್ವಿಟರ್ ತನ್ನ ವಿಶ್ವಾಸಾರ್ಹತೆ ಉಳಿಸಿಕೊಂಡು, ವರ್ಚಸ್ಸು ಹೆಚ್ಚಿಸುವತ್ತ ಗಮನ ನೀಡಿದೆ. ಹೀಗಾಗಿಯೇ, ಪ್ರಮುಖ ಬದಲಾವಣೆಗಳಿಗೆ ಮುಂದಾಗಿರುವ ಅದು ಈಗ ಹೊಸ ಸಿಇಒ ನಿಯುಕ್ತಿ ಮಾಡಿದೆ. ಈ ಮೂಲಕ ಜಾಗತಿಕ ರಂಗದ ಪ್ರಮುಖ ಕಂಪನಿಗಳಲ್ಲಿ ಭಾರತ ಮೂಲದವರು ಆಯಕಟ್ಟಿನ ಹುದ್ದೆ ಅಲಂಕರಿಸುವ ಪರಿಪಾಠ ಮುಂದುವರಿದಿದೆ.
ಪರಾಗ್ ಸಂಬಳ ಎಷ್ಟು ಗೊತ್ತೆ?: ಪರಾಗ್ ಅಗರವಾಲ್ ಅವರಿಗೆ ಟ್ವಿಟರ್ ಕಂಪನಿ ವಾರ್ಷಿಕವಾಗಿ 1 ಮಿಲಿಯನ್ ಡಾಲರ್ ವೇತನ ಪಾವತಿಸುತ್ತಿದೆ. ಅಂದರೆ ತಿಂಗಳಿಗೆ -ಠಿ;62,56,000 ಜತೆಗೆ ಬೋನಸ್ಗಳು ಪ್ರತ್ಯೇಕ. ಇದಲ್ಲದೆ, 12.5 ಮಿಲಿಯನ್ ಡಾಲರ್ ಮೌಲ್ಯದ ನಿಯಂತ್ರಿತ ಷೇರು ಗಳನ್ನು (ಆರ್ಎಸ್ಯುು) ಕಂಪನಿ ಕಡೆಯಿಂದ ಸ್ವೀಕರಿಸಲಿದ್ದಾರೆ.
ಜಗತ್ತಿನ ಮುಂಚೂಣಿ ಮಾಹಿತಿ-ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಮೈಕ್ರೋಸಾಫ್ಟ್ಗೆ ಸತ್ಯ ನಾಡೆಳ್ಲ 2014 ಫೆಬ್ರವರಿಯಿಂದ ಸಿಇಒ ಆಗಿದ್ದಾರೆ. 1967 ಆಗಸ್ಟ್ 19ರಂದು ಹೈದರಾಬಾದಿನಲ್ಲಿ ಜನಿಸಿದ ಸತ್ಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಇಂಜಿನಿಯರಿಂಗ್ ಪೂರ್ಣಗೊಳಿಸಿದರು. 1992ರಿಂದ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗೂಗಲ್ನ ಮಾತೃಸಂಸ್ಥೆ ಅಲ್ಪಾಬೆಟ್ಗೆ ಸುಂದರ್ ಪಿಚೈ 2019ರಿಂದ ಸಿಇಒ. 1972 ಜೂನ್ 10ರಂದು ತಮಿಳುನಾಡಿನ ಮದುರೈನಲ್ಲಿ ಜನಿಸಿದ ಸುಂದರ್, ಖರಗಪುರ್ ಐಐಟಿಯಿಂದ ಪದವಿ ಪಡೆದರು. ಬಳಿಕ ಕ್ಯಾಲಿಫೋರ್ನಿಯಾದ ಸ್ಟಾ್ಯನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿದರು. 2014ರಲ್ಲಿ ಗೂಗಲ್ ಮುಖ್ಯಸ್ಥರಾಗಿ ನಿಯುಕ್ತರಾದರು.
1963 ಮೇ 27ರಂದು ಹೈದರಾಬಾದಿನಲ್ಲಿ ಜನಿಸಿದ ಶಾಂತನು ನಾರಾಯಣ್, ಉಸ್ಮಾನಿಯಾ ವಿ.ವಿ.ಯಲ್ಲಿ ಪದವಿ, ಬಳಿಕ ಕ್ಯಾಲಿಫೋರ್ನಿಯಾ ವಿ.ವಿ.ಯಲ್ಲಿ ಎಂಬಿಎ ಪೂರ್ಣಗೊಳಿಸಿದರು. ಅಡೋಬ್ ಸೇರ್ಪಡೆ ಮುನ್ನ ಆಪಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದ ಶಾಂತನು, 2007ರಿಂದ ಅಡೋಬ್ ಸಿಇಒ ಮತ್ತು ಚೇರ್ಮನ್ ಆಗಿದ್ದಾರೆ.
1962ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದ ಅರವಿಂದ ಕೃಷ್ಣಾ ಐಐಟಿ ಕಾನಪುರದಲ್ಲಿ ಪದವಿ, ಬಳಿಕ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಪಿಎಚ್.ಡಿ. ಪಡೆದರು. ಕಳೆದ 30 ವರ್ಷಗಳಿಂದ ಐಬಿಎಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು, 2020ರಲ್ಲಿ ಸಿಇಒ ಹುದ್ದೆಗೇರಿದ್ದಾರೆ.
ಉತ್ತರಪ್ರದೇಶದ ಕಾನಪುರದಲ್ಲಿ 1968 ಜೂನ್ 27ರಂದು ಜನಿಸಿದ ಸಂಜಯ್ ಮಲ್ಹೋತ್ರಾ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರರು. ಬಳಿಕ, ಕ್ಯಾಲಿಫೋರ್ನಿಯಾ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ಇವರು ಸ್ಯಾನ್ಡಿಸ್ಕ್ ಕಂಪನಿಯ ಸಹಸಂಸ್ಥಾಪಕರೂ ಹೌದು. 2017 ಫೆಬ್ರವರಿಯಿಂದ ಮೈಕ್ರಾನ್ ಟೆಕ್ನಾಲಜಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಜನಿಸಿದ ನಿಕೇಶ್ ಅರೋರಾ ಬನಾರಸ್ ಹಿಂದು ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಬಳಿಕ ಬೋಸ್ಟನ್ ಕಾಲೇಜ್ ಮತ್ತು ನಾರ್ತ್ಈಸ್ಟ್ರನ್ ವಿ.ವಿ.ಯಲ್ಲಿ ಉನ್ನತ ವಿದ್ಯಾಭ್ಯಾಸ. 2018ರ ಜೂನ್ನಿಂದ ಪಾಲೋ ಆಲ್ಟೋದ ಸಿಇಒ. ಗೂಗಲ್ ಕಂಪನಿಯ ಆಯಕಟ್ಟಿನ ಹುದ್ದೆಯಲ್ಲಿದ್ದ ನಿಕೇಶ್ ನಂತರ ಜಪಾನಿನ ಸಾಫ್ಟ್ಬ್ಯಾಂಕ್ ಗ್ರೂಪಿನ ಸಿಇಒ ಆಗಿ ಕಾರ್ಯನಿರ್ವಹಿಸಿದರು.