

ಹಾವೇರಿ: ಸರ್ಧಾರ ವಲ್ಲಭಭಾಯಿ ಪಟೇಲ್ ಈ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಯುವಕರ ಮೇಲಿದೆ. ಯುವ ಶಕ್ತಿಗೆ ಚಾರಿತ್ರ್ಯ ಮತ್ತು ದೇಶಪ್ರೇಮ ಮುಖ್ಯ. ದೇಶ ಪ್ರೇಮ ನಮ್ಮ ಹೃದಯದಲ್ಲಿ ಇದ್ದರೆ ನಾವು ಅತ್ಯಂತ ಯಶಸ್ವಿಯಾಗುತ್ತೇವೆ. ವಿಶ್ವದಲ್ಲಿಯೇ ಭಾರತೀಯ ಯುವಕರಿಗೆ ಒಳ್ಳೆಯ ಅವಕಾಶವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಮೇರಾ ಯುವ ಭಾರತ, ಜಿ.ಎಚ್. ಕಾಲೇಜ್, ಓಂ ಯುವಕ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಸರ್ಧಾರ್ ಎಟ್&150 ಏಕತಾ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷವಾದರೂ ನಮ್ಮಲ್ಲಿ ಇನ್ನೂ ಹಲವಾರು ಪ್ರಶ್ನೆಗಳು ಜೀವಂತವಾಗಿವೆ. ಸರ್ಧಾರ ವಲ್ಲಭಭಾಯಿ ಪಟೇಲ್ ಅವರು ಅವತ್ತು ಇಡೀ ದೇಶದ ಏಕತೆ ಮತ್ತು ಅಖಂಡತೆ ಮಾಡದೆ ಇದಿದ್ದರೆ ಭಾರತ ಅತ್ಯಂತ ಶಕ್ತಿ ಸಾಮರ್ಥ್ಯ ಹೊಂದಿರುವ ದೇಶವಾಗಿ ಹೊರ ಹೊಮ್ಮುತ್ತಿರಲಿಲ್ಲ. ಪ್ರಜಾಪ್ರಭುತ್ವದ ಮೊದಲನೇ ಬೀಜವನ್ನು ಹಾಕಿರುವುದು ಸರ್ದಾರ್ ವಲ್ಲಭಭಾಯಿ ಪಟೇಲ್ರು.
ಸಂವಿಧಾನದಲ್ಲಿ ಪ್ರಜಾಪ್ರಭುತ್ವ ಒಪ್ಪಿದರೆ ಅದು ಇಡೀ ದೇಶದಲ್ಲಿ ಕಾರ್ಯಗತ ಆಗಬೇಕಾದರೆ ಅದು ಈ ದೇಶ ಗಣರಾಜ್ಯವಾಗಿ ಒಕ್ಕೂಟ ವ್ಯವಸ್ಥೆಯಾಗಬೇಕು. ರಾಜ್ಯಗಳ ನಿಮಾರ್ಣ ಮಾಡುವುದರಲ್ಲಿ ವಲ್ಲಭಭಾಯಿ ಪಟೇಲ್ ಅವರ ಪಾತ್ರ ಬಹಳ ದೊಡ್ಡದಿದೆ. ಭಾರತ ಒಕ್ಕೂಟ ಆಗಬೇಕಾದರೆ ಕೆಲವರು ಅದನ್ನು ಒಪ್ಪಿಕೊಳ್ಳಲಿಲ್ಲ, ಕಾಶ್ಮೀರದಲ್ಲಿ ಅವತ್ತಿನ ಮಹಾರಾಜರು ಭಾರತ ಒಕ್ಕೂಟಕ್ಕೆ ಸೇರಬೇಕೆಂದು ತೀಮಾರ್ನ ಮಾಡಿದರೂ ಕೂಡ ಅಲ್ಲಿನ ನಾಯಕರು ಪ್ರಧಾನಿ ಜವಾಹರಲಾಲ್ ನೇಹರೂ ಅವರೂ ಕಾಶ್ಮಿರಿಗರಿಗೆ ವಿಶೇಷವಾದ ಸಂವಿಧಾನದ ಹಕ್ಕು, ಅವರದೇ ಆದ ಕಾನೂನು, ಅವರದೇ ಆದ ಆಡಳಿತ ಮಾಡಲು ಒಪ್ಪಿಕೊಂಡರು. ಒಂದು ತಪ್ಪು ನಿರ್ಣಯದಿಂದ ನಮ್ಮ ದೇಶದ ಶಿರದ ಒಂದು ಭಾಗವನ್ನು ನಾವು ಕಳೆದುಕೊಂಡಿದ್ದೇವೆ. ಇದೆಲ್ಲವನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಪ್ರಮುಖರಾದ ಶಿವರಾಜ ಸಜ್ಜನ, ಅರುಣಕುಮಾರ ಪೂಜಾರ, ಎಸ್.ಎಲ್. ಬಾಲೆಹೊಸುರ, ಗವಿಸಿದ್ದಪ್ಪ ದ್ಯಾಮಣ್ಣವರ, ಸಂತೋಷ ಆಲದಕಟ್ಟಿ, ಮಂಜುನಾಥ ಗಾಣಿಗೇರ, ಪ್ರಾಚಾರ್ಯ ಎಂ.ಎಂ. ಹಳ್ಳಿಯವರ, ಮೇರಾ ಭಾರತ ಜಿಲ್ಲಾ ಯುವ ಅಧಿಕಾರಿ ಭುಕ್ಯಾ ಸಂಜೀವ ಮತ್ತಿತರರು ಪಾಲ್ಗೊಂಡಿದ್ದರು.