

ಕರಾಚಿ; ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಭಾರತದಿಂದ ಕರೆದೊಯ್ದ ಮಹಿಳೆಯನ್ನು ಏಜೆಂಟ್ರೊಬ್ಬರು ವಂಚಿಸಿ ಪಾಕಿಸ್ತಾನದ ಕರಾಚಿಯಲ್ಲಿ ಬಿಟ್ಟಿದ್ದಾರೆ. ಇದೀಗ 23 ವರ್ಷಗಳ ಬಳಿಕ ನೆರೆಯ ರಾಷ್ಟ್ರದಿಂದ ತನ್ನ ತವರು ಭಾರತಕ್ಕೆ ಮಹಿಳೆಯೊಬ್ಬರು ಬಂದಿರುವ ಘಟನೆಯೊಂದು ನಡೆದಿದೆ.
ಮುಂಬೈನ 73 ವರ್ಷದ ಹಮೀದಾ ಬಾನು ಭಾರತಕ್ಕೆ ಹಿಂತಿರುಗಿದ ಮಹಿಳೆ. ಖಾಸಗಿ ಸುದ್ದಿಸಂಸ್ಥೆಯ ಸಂದರ್ಶನಲ್ಲಿ ಮಾತನಾಡಿರುವ ಹಮೀದಾ ಅಲ್ಲಿನ ಕರಾಳ ಪರಿಸ್ಥಿಯನ್ನು ಬಿಚ್ಚಿಟ್ಟಿದ್ದಾರೆ. ''ದುಬೈನಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ತನ್ನನ್ನು ವಂಚಿಸಿ ನೆರೆಯ ದೇಶಕ್ಕೆ(ಪಾಕಿಸ್ತಾನ) ಕರೆದುಕೊಂಡು ಹೋಗಲಾಯಿತು. ಕೆಲ ದಿನಗಳ ಬಳಿಕ ಮೋಸ ಹೊಗಿದ್ದೇನೆ ಎಂದು ನನಗೆ ಅರಿವಾಯಿತು. ಅಲ್ಲಿಂದ ಭಾರತಕ್ಕೆ ಬರುವ ಎಲ್ಲ ಪ್ರಯತ್ನಗಳನ್ನು ಮಾಡಿದೆ. ಇದು ಕೈಗೂಡಲಿಲ್ಲ. ಅಲ್ಲಿ ನನಗೆ ಮದುವೆಯಾಗಿತು. ಮದುವೆಯಾದ 12 ವರ್ಷಗಳ ನಂತರ ಪತಿ ನಿಧನರಾದರು'' ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು, "ನಾನು 23 ವರ್ಷಗಳ ನಂತರ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದೇನೆ. ಪಾಕಿಸ್ತಾನದಲ್ಲಿ ಎಲ್ಲಾ ಕಷ್ಟಗಳನ್ನು ಎದುರಿಸಿ ದಿನಗಳನ್ನೂ ದೂಡಿದೆ. ಬಳಿಕ ಅಲಲ್ಲಿರುವವರ ಜತೆ ವಾಸಿಸಿದೆ. ಇಲ್ಲೆ ನನ್ನ ಕೊನೆಯ ಜೀವನ ಎಂದು ನನಗೆ ಅಗ್ಗಾಗೆ ಅನಿಸುತಿತ್ತು. ಆದರೆ, ಒಂದು ವಿಡಿಯೋ ವೈರಲ್ ಕಾರಣದಿಂದ 23 ವರ್ಷಗಳ ಬಳಿಕ ಮತ್ತೆ ನನ್ನ ತವರು ದೇಶಕ್ಕೆ ಮರಳಿದ್ದೇನೆ'' ಎಂದು ಸಂತೋಷ ವ್ಯಕ್ತಪಡಿಸಿದರು.
ಪಾಕಿಸ್ತಾನಿ ಯೂಟ್ಯೂಬರ್ ಅಕೆಯನ್ನು ಆಕಸ್ಮಿಕವಾಗಿ ಭೇಟಿಯಾಗಿ ಮಾತನಾಡಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.ವಿಡಿಯೊದಲ್ಲಿ ಅಕೆಯನ್ನು ಮೋಸದಿಂದ ಪಾಕಿಸ್ತಾನಕ್ಕೆ ಕರೆ ತಂದು ಇಲ್ಲಿ ಬಿಟ್ಟಿದ್ದಾರೆ ಎಂದು ಹೇಳಿಕೊಂಡಿದ್ದರು. ಅಂದಿನಿಂದ ಈ ವಿಡಿಯೋ ಪಾಕಿಸ್ತಾನ ಮತ್ತು ಭಾರತದಲ್ಲಿ ಭಾರೀ ವೈರಲ್ ಆಗಿತ್ತು. ಬಳಿಕ ಭಾರತೀಯ ರಾಯಭಾರ ಕಚೇರಿಯು ಡಿಸೆಂಬರ್ ಆಕೆಯನ್ನು ಭೇಟಿಯಾದ ಮಾತುಕತೆ ನಡೆಸಿದ್ದಾರೆ. ಅಲ್ಲಿಂದ ಒಂದು ವರ್ಷದ ನಂತರ ಇಂದು(ಡಿ.17ರ ಮಂಗಳವಾರ) ಅಟ್ಟಾರಿ-ವಾಘಾ ಗಡಿಯ ಮೂಲಕ ಅಮೃತಸರಕ್ಕೆ ಬಂದಿದ್ದಾರೆ. ಅಲ್ಲಿಂದ ನೆರವಾಗಿ ತನ್ನ ತವರು ಊರು ಮುಂಬೈಗೆ ಬಂದಿಳಿದ್ದಾರೆ,(ಏಜೆನ್ಸೀಸ್).