ಮನುಷ್ಯನ ಮಾಂಸದ ರುಚಿ ಹೇಗಿರುತ್ತದೆ ಗೊತ್ತಾ?ವಿಡಿಯೋ ಸಮೇತ Korowai tribe ರಹಸ್ಯ ಬಯಲು

Indian vlogger meets Korowai tribe
Published on

Indonesia Tribe: ಭಾರತದಲ್ಲಿ ಹಲವಾರು ರೀತಿಯ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಅದರಲ್ಲಿ ಕೊರೊವೈ ಬುಡಕಟ್ಟು ( Korowai tribe  )ಜನಾಂಗವು ಒಂದು. ಇವರು ಇಂಡೋನೇಷ್ಯಾ ಕಾಡಿನಲ್ಲಿ ವಾಸಿಸುತ್ತಾರೆ. ಇವರಿಗೆ 'ನರಭಕ್ಷಕ' (Homen Eating tribe)ಜನಾಂಗ ಎಂದು ಕರೆಯುತ್ತಾರೆ. ಇತ್ತೀಚೆಗೆ ಇಂಡಿಯನ್ ಟ್ರಾವೆಲರ್ ಎಂದೇ ಗುರುತಿಸಿಕೊಂಡ ವ್ಲಾಗರ್ ಧೀರಜ್‌ ಮೀನಾ ಈ ಜನಾಂಗವನ್ನು ಭೇಟಿ ಮಾಡಿ ಕೆಲವು ವಿಚಾರಗಳನ್ನು ತಿಳಿದು ಶಾಕ್​ ಆಗಿದ್ದಾನೆ.

ಕೊರೊವೈ ಬುಡಕಟ್ಟು ಜನಾಂಗವು ಇಂಡೋನೇಷ್ಯಾದ ಪಪುವಾ ಪ್ರಾಂತ್ಯದವರು. ಅನೇಕ ವರ್ಷಗಳಿಂದ ಇದೆ ಕಾಡಿನಲ್ಲಿ ವಾಸಿಸುತ್ತಿದ್ದಾರೆ. ಇವರ ಕಸುಬು ಭೇಟಿಯಾಡುವುದು. ಈ ಜನಾಂಗದವರನ್ನು ನರಭಕ್ಷಕರು ಎಂದು ಕರೆಯುತ್ತಾರೆ. ಇವರು ನ್ಯೂಗಿನಿಯಾ ದ್ವೀಪದ ಆಗ್ನೇಯ ಭಾಗದಲ್ಲಿ ವಾಸಿಸುತ್ತಾರೆ. ಇವರು 1970 ರ ದಶಕದವರಗೂ ಹೊರಗಿನ ಪ್ರಪಂಚದಿಂದ ದೂರವಾಗಿಯೇ ಬದುಕುತ್ತಿದ್ದರು. ಇವರ ಸಂಪ್ರದಾಯದ ಪ್ರಕಾರ ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ನಂಬಿಕೆಗಳ ಭಾಗವೇ ನರಭಕ್ಷಕತೆಯಾಗಿದೆ. ಆದರೆ ಕಾಲ ಬದಲಾದಂತೆ ಅವರ ಈ ಸಂಪ್ರದಾಯ ಕ್ರಮೇಣ ನಾಶವಾಗುತ್ತಾ ಬಂದಿದೆ.

ಭಾರತದ ಟ್ರಾವೆಲ್‌ ವ್ಲಾಗರ್‌ ಧೀರಜ್‌ ಮೀನಾ ಅವರು ಅವರು ಇಂಡೋನೇಷ್ಯಾದ ಅಪುವಾ ಪ್ರಾಂತ್ಯದ ಕೊರೊವೈ ಬುಡಕಟ್ಟು ಜನಾಂಗವನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ, ಕೊರೊವೈ ಜನಾಂಗದ ಒಬ್ಬ ವ್ಯಕ್ತಿಗೆ ನೀವು ಮನುಷ್ಯರನ್ನು ತಿನ್ನುತ್ತೀರಾ ಎಂದು ಕೇಳಿದ್ದೇವೆ. ಅದು ನಿಜವೇ? ನೀವು ಮನುಷ್ಯರನ್ನು ತಿನ್ನುತ್ತೀರಾ ಎಂದು ಪ್ರಶ್ನೇ ಕೇಳಿದರು.

ಇದಕ್ಕೆ ಉತ್ತರಿಸಿದ ಸಮುದಾಯದ ಹಿರಿಯ ಸದಸ್ಯ, ನಾನು ಮನುಷ್ಯನ ಮಾಂಸವನ್ನು ತಿನ್ನಲ್ಲ. ಹಿಂದೆಲ್ಲಾ ತಿನ್ನುತ್ತಿದ್ದರು, ಅದು ಕೂಡಾ ತಮ್ಮ ಮೇಲೆ ದಾಳಿ ಮಾಡಲು ಬರುತ್ತಿದ್ದ ಹಾಗೂ ನಮ್ಮ ಸಮುದಾಯದ ಮಹಿಳೆಯರನ್ನು ಅಪಹರಿಸುತ್ತಿದ್ದ ಶತ್ರುಗಳನ್ನು ಮಾತ್ರ ಕೊಂದು ಅವರ ಮಾಂಸವನ್ನು ತಿನ್ನುತ್ತಿದ್ದರು ಎಂದು ಹೇಳಿದ್ದಾರೆ. ಹಾಗೂ ನಮ್ಮ ತಂದೆಯವರು ಹೇಳುತ್ತಿದ್ದಂತೆ ಮಾನವನ ಮಾಂಸದ ರುಚಿಯು ʼಹಂದಿ ಮಾಂಸʼದ ರುಚಿಯನ್ನು ಹೋಲುತ್ತದೆ ಎಂಬುವುದನ್ನು ಕೂಡಾ ಹೇಳಿದ್ದಾರೆ. ಈ ಬುಡಕಟ್ಟು ಸಮುದಾಯದವರು ನೀಡಿದ ಮಾಹಿತಿಯಂತೆ ಮನುಷ್ಯನ ಮಾಂಸದ ರುಚಿಯು ಹಂದಿ ಮಾಂಸದಂತಿರುತ್ತದೆ.

ನಮ್ಮ ತಂದೆಯ ಪೀಳಿಗೆಯ ಜನರು ಅಂದರೆ 16 ವರ್ಷಗಳ ಹಿಂದೆ ನಾವು ಮನುಷ್ಯರನ್ನು ಭೇಟಿಯಾಡಿ ಅವರ ಮಾಸಂವನ್ನು ತಿನ್ನುತ್ತೀದ್ದೆವು. ನಮ್ಮ ಸಂಪ್ರದಾಯವನ್ನು ಉಳಿಸಲು ನಮ್ಮ ಸಂಬಂಧಿಕರು ಸತ್ತರೆ ಅವರ ಮಾಂಸವನ್ನು ಸಹ ತಿನ್ನುತ್ತಿದ್ದೇವು. ಆದರೆ ಈಗ ಈ ಪದ್ಧತಿ ಇಲ್ಲ. ಏಕೆಂದರೆ ನಮ್ಮ ಕೊರೊವೈನಲ್ಲಿ ಹಲವಾರು ಗುಂಪುಗಳಿವೆ. ಕೆಲವು ಸಂದರ್ಭಗಳಲ್ಲಿ ನಾವೇ ಪರಸ್ಪರ ಹೊಡೆದಾಡಿಕೊಂಡು ಒಬ್ಬರನ್ನೊಬ್ಬರು ಬಂಧಿಸಿದ್ದೇವೆ. ಹಾಗಾಗಿ ಈ ಸಂಪ್ರದಾಯ ಇವಾಗ ಇಲ್ಲ ಎಂದು ಹೇಳಿಕೊಂಡರು. ಇವಾಗ ಉಳಿದುಕೊಂಡಿರುವುದು ಭೇಟೆಯಾಡುವುದು ಮತ್ತು ಮೀನುಗಾರಿಕೆ ಮಾತ್ರ ಎಂದು ಹೇಳಿಕೊಂಡಿದ್ದಾರೆ.

ಇವರು ತಮ್ಮ ಉಳಿವಿಗಾಗಿ ದೂರದ ಕಾಡಿನಲ್ಲಿ ಭೇಟಿಯಾಡುತ್ತಾ ಜೀವಿಸುತ್ತಿದ್ದಾರೆ. ಮನೆ ಮಾಡಿಕೊಂಡು ವಾಸಿಸುತ್ತಾರೆ ಎಂದು ವ್ಲಾಗರ್ ತಮ್ಮ ಇನ್​ಸ್ಟಾಗ್ರಾಮ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ಬುಡಕಟ್ಟು ಜನಾಂಗದವರ ಬಳಿಯೇ ಮನುಷ್ಯ ಮಾಂಸದ ರುಚಿ ಹೇಗಿರುತ್ತೆ ಎಂಬ  ಪ್ರಶ್ನೆಗೆ ಬಹಳ ಸೊಗಸಾಗಿ ವಿವರಣೆಯನ್ನು ನೀಡಿದ್ದು, ಈ ಕುರಿತ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net