

ಭಾರತ ಮೂಲದ ದಂಪತಿ ಹಾಗೂ ಅವರ ಮೂರು ವರ್ಷದ ಮಗು ಲಂಡನ್ನಲ್ಲಿ ಮೃತಪಟ್ಟಿದ್ದಾರೆ. ಪಶ್ಚಿಮ ಲಂಡನ್ನ ಬ್ರೆಂಟ್ಫೋರ್ಡ್ನಲ್ಲಿರುವ ಅವರ ನಿವಾಸದಲ್ಲಿಯೇ ಮೂವರ ಶವವೂ ಪತ್ತೆಯಾಗಿದ್ದು, ಪೊಲೀಸರು ಇದೊಂದು ಕೊಲೆ ಅಥವಾ ಆತ್ಮಹತ್ಯೆ ಎಂದು ಹೇಳಿದ್ದಾರೆ.
ತಮಿಳಿಗರಾದ ಕುಹಾ ರಾಜ್ ಸೀತಂಪರನಾಥನ್ (42), ಪತ್ನಿ ಕಾಮೇಶ್ವರಿ ಶಿವರಾಜ್ (ಪೂರ್ಣಾ- (36) ಮತ್ತು ಮಗ ಕೈಲಾಶ್ ಕುಹಾ ರಾಜ್ (3) ಮೃತರು. ಕಾಮೇಶ್ವರಿ ಹಾಗೂ ಕೈಲಾಶ್ನನ್ನು ಸೆ.21ರಂದು ನೋಡಿದ್ದೇ ಕೊನೆ. ಕಡೆಗೆ ಎಲ್ಲೂ ಕಾಣಿಸಲೇ ಇಲ್ಲ ಎಂದು ಅವರ ನೆರೆಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಈ ಹೇಳಿಕೆಗಳು ಇನ್ನೂ ಅನುಮಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಹಾಥರಸ್ ಗ್ಯಾಂಗ್ ರೇಪ್: ಗ್ರಾಮಕ್ಕೆ ಭೇಟಿ ನೀಡಿದ್ದ ಆಪ್ ಶಾಸಕನ ವಿರುದ್ಧ ಪ್ರಕರಣ ದಾಖಲು
ಪೊಲೀಸರು ಸೋಮವಾರ ರಾತ್ರಿ ಮನೆಯ ಬಾಗಿಲು ಒಡೆದು, ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಇವರಲ್ಲಿ ಕುಹಾ ರಾಜ್ ಮೈಮೇಲೆ ಹಲವು ಕಡೆಗಳಲ್ಲಿ ಇರಿದ ಗಾಯಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಲಂಡನ್ ಪೊಲೀಸರು ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದಾರೆ. ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)