ದೆಹಲಿಯ ಅತಿದೊಡ್ಡ ಡ್ರಗ್ಸ್ ದಂಧೆ: 17 ವರ್ಷ ಬ್ರಿಟನ್​ನಲ್ಲಿದ್ದ ವ್ಯಕ್ತಿ ಪಂಜಾಬ್​ನಲ್ಲಿ ಬಂಧನ!

DelhiPolice
Published on

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಅತಿದೊಡ್ಡ ಮಾದಕ ದ್ರವ್ಯ ದಂಧೆಯಲ್ಲಿ ಸುಮಾರು 2,000 ಕೋಟಿ ರೂ. ಮೌಲ್ಯದ 560 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡ ದೆಹಲಿ ಪೊಲೀಸರು ಐದನೇ ಆರೋಪಿಯನ್ನು ಬಂಧಿಸಿದ್ದಾರೆ.

ಈತ ದೇಶವನ್ನು ತೊರೆದು ಪರಾರಿಯಾಗಲು ಯತ್ನಿಸಿದ್ದ ವೇಳೆ ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿತೇಂದ್ರ ಪಾಲ್ ಸಿಂಗ್ ಅಲಿಯಾಸ್ ಜಸ್ಸಿ (40) ಎಂಬಾತ ಡ್ರಗ್ ಜಾಲದ ವಹಿವಾಟಿಗಾಗಿ ಬ್ರಿಟನ್​ನಿಂದ ಭಾರತಕ್ಕೆ ಬಂದಿದ್ದ. ಆದರೆ ಡ್ರಗ್ಸ್ ಜಾಲ ಭೇದಿಸಿದ ದೆಹಲಿ ಪೊಲೀಸರು ಇತರ ನಾಲ್ವರನ್ನು ಬಂದಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಜಿತೇಂದ್ರ ಪಾಲ್ ಬ್ರಿಟನ್​ಗೆ ಪರಾರಿಯಾಗಲು ಸಿದ್ಧತೆ ಮಾಡಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

ಜಿತೇಂದ್ರ ಪಾಲ್ ಸಿಂಗ್ ಅಲಿಯಾಸ್ ಜಸ್ಸಿ ಕಳೆದ 17 ವರ್ಷಗಳಿಂದ ಯುಕೆಯಲ್ಲಿ ವಾಸ ಮಾಡುತ್ತಿದ್ದು, ಅವರು ಯುಕೆ ಗ್ರೀನ್ ಕಾರ್ಡ್ ಹೊಂದಿದ್ದಾನೆ ಎನ್ನಲಾಗಿದೆ.

ಅಕ್ಟೋಬರ್ 2 ರಂದು, ದೆಹಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ದಕ್ಷಿಣ ದೆಹಲಿಯ ಮಹಿಪಾಲ್‌ಪುರದ ಗೋಡೌನ್‌ನಿಂದ ಸುಮಾರು 5,620 ಕೋಟಿ ರೂಪಾಯಿ ಮೌಲ್ಯದ 560 ಕಿಲೋಗ್ರಾಂಗಳಷ್ಟು ಕೊಕೇನ್ ಮತ್ತು 40 ಕಿಲೋಗ್ರಾಂಗಳಷ್ಟು ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡಿದ್ದರು.

ಆರೋಪಿ ತುಷಾರ್ ಗೋಯಲ್ ಬುಧವಾರ ಬಂಧಿಸಿದ್ದು, ಈತ ಭಾರತದಲ್ಲಿನ ಕೊಕೇನ್ ಮಾರಾಟ ಜಾಲದ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ. ಬಂಧಿತ ಆರೋಪಿ ಕಾಂಗ್ರೆಸ್ ಪಕ್ಷದ ನಂಟು ಹೊಂದಿರುವುದಾಗಿ ಬಿಜೆಪಿ ಆರೋಪಿಸಿದ್ದು, ಈ ವಿಚಾರ ಎರಡು ಪಕ್ಷಗಳ ನಾಯಕರು ಆರೋಪ,, ಪ್ರತ್ಯಾರೋಪದಲ್ಲಿ ತೊಡಗುವಂತೆ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net