ರೈತರು ಬೆಳೆದ ಬೆಳೆ ಹಾಳಾಗುವುದನ್ನು ತಪ್ಪಿಸಲು ಹಣ್ಣು, ತರಕಾರಿ ವಿದೇಶಕ್ಕೆ ರಫ್ತು ಮಾಡಲು ಕೇಂದ್ರದ ನಿರ್ಧಾರ

Fruite
Published on

ಭಾರತದಲ್ಲಿ ರೈತರು ಬೆಳೆದ ಬೆಳೆ ಹಾಳಾಗುತ್ತಿರುವುದನ್ನು ತಪ್ಪಿಸುವ ಸಲುವಾಗಿ ಹಣ್ಣು ಮತ್ತು ತರಕಾರಿಯನ್ನು ಏರ್ ಇಂಡಿಯಾದ ವಿಶೇಷ ವಿಮಾನಗಳ ಮೂಲಕ ಲಂಡನ್ ಮತ್ತು ಜರ್ಮನ್​ನ ಫ್ರಾಂಕ್​ಫರ್ಟ್​ಗೆ ರಫ್ತು ಮಾಡುವುದಾಗಿ ಸರ್ಕಾರ ತಿಳಿಸಿದೆ.

ಕೃಷಿ ಉಡಾನ್ ಯೋಜನೆಯಡಿಯಲ್ಲಿ ಹಣ್ಣು ಮತ್ತು ತರಕಾರಿಯನ್ನು ರಫ್ತು ಮಾಡಲಾಗು ತ್ತಿದೆ. ಏಪ್ರಿಲ್ 13ರಂದು ಒಂದು ವಿಮಾನ ಲಂಡನ್​ಗೆ ತೆರಳಲಿದ್ದು ಏಪ್ರಿಲ್ 15ರಂದು ಒಂದು ವಿಮಾನವು ಫ್ರಾಂಕ್​ಫರ್ಟ್​ಗೆ ತೆರಳಲಿದೆ. ಈ ಎರಡೂ ವಿಮಾನಗಳು ವಾಪಾಸು ದೇಶಕ್ಕೆ ಮರಳುವಾಗ ಕೆಲವು ಅಗತ್ಯ ಔಷಧಗಳನ್ನು ಆ ದೇಶಗಳಿಂದ ಹೊತ್ತು ತರಲಿವೆ.

ಉಡಾನ್ ಯೋಜನೆಯೊಡನೆ ಕೃಷಿ ಉಡಾನ್ ಯೋಜನೆಯೂ ಸಹ ಭಾರತದಲ್ಲಿ ಜಾರಿಯಲ್ಲಿದ್ದು ಇದು ಅನೇಕ ರೈತರಿಗೆ ತಮ್ಮ ಬೆಳೆಗಳನ್ನು ಬೇರೆಯೂರಿಗೆ ಸಾಗಿಸಲು ಸಹಕಾರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net