ದಾಖಲೆ ಇಲ್ಲದೆ 18 ವರ್ಷ ಗಲ್ಫ್​ನಲ್ಲಿ ಪರದಾಟ!

UAE
Published on

ನವದೆಹಲಿ: ಕೇರಳದ ತ್ರಿಶೂರ್​ನ ಸುನೀಲ್​ಕುಮಾರ್​ ಎಂಬಾತ ಯುಎಇನಲ್ಲಿ ದಾಖಲೆಗಳನ್ನು ಕಳೆದುಕೊಂಡು ಸಿಕ್ಕಿ ಹಾಕಿಕೊಂಡಿದ್ದು, ಕೊನೆಗೂ 18 ವರ್ಷಗಳ ಪರದಾಟದ ಬಳಿಕ ಮನೆಗೆ ಮರಳಿದ್ದಾರೆ. 2005ರಲ್ಲಿ ಯುಎಇಗೆ ತೆರಳಿದ್ದ ಇವರು, ಕೆಲವೇ ದಿನಗಳಲ್ಲಿ ಕೆಲಸ ಕಳೆದುಕೊಂಡು, ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದರು. ನಂತರ 2007ರಲ್ಲಿ ಪಾಸ್​ಪೋರ್ಟ್​ ಅವಧಿ ಮುಗಿದರೂ ದುಬೈನಲ್ಲಿನ ಇಂಡಿಯನ್​ ಕಾನ್ಸುಲೇಟ್​ನಿಂದ ತುರ್ತು ಪ್ರಮಾಣಪತ್ರ ಪಡೆದಿದ್ದರು.

ಆದರೆ ಆರೋಗ್ಯ ಹದಗೆಟ್ಟಿದ್ದರಿಂದ ಕ್ಷಮಾದಾನ ಸಿಕ್ಕರೂ ಮನೆಗೆ ಮರಳಲು ಆಗಿರಲಿಲ್ಲ. ರಾಯಭಾರ ಕಚೇರಿ ಮೂಲಕ ಈ ವಿಷಯ ಸಾಮಾಜಿಕ ಕಾರ್ಯಕರ್ತರಿಗೆ ಗೊತ್ತಾಗಿ ಮುಂದಿನ ವ್ಯವಸ್ಥೆ ಮಾಡಲು ಮುಂದಾದರೂ ಪಾಸ್​ಪೋರ್ಟ್​ ವಿವರ ಓದಲು ಸಾಧ್ಯವಾಗದ್ದರಿಂದ ಅದನ್ನು ಕೊಚ್ಚಿ ಪಾಸ್​ಪೋರ್ಟ್​ ಕಚೇರಿಗೆ ಕಳುಹಿಸಿ 2023ರ ಅಕ್ಟೋಬರ್​ನಲ್ಲಿ ಇನ್ನೊಂದು ತುರ್ತು ಪ್ರಮಾಣಪತ್ರ ಪಡೆಯಲಾಯಿತು.

ಈ ಮಧ್ಯೆ ಸುನಿಲ್​ ಆರೋಗ್ಯ ಇನ್ನಷ್ಟು ಹದಗೆಟ್ಟು ಶಾರ್ಜಾದಲ್ಲಿ ಉಳಿಯುವಂತಾಗಿತ್ತು. ಅಗತ್ಯವಿರುವ ಇನ್ನಷ್ಟು ಕ್ರಮಗಳನ್ನು ಡಿಸೆಂಬರ್​ನಲ್ಲಿ ಕೈಗೊಂಡ ಸಾಮಾಜಿಕ ಕಾರ್ಯಕರ್ತರು ಜ. 4ರಂದು ಕೇರಳಕ್ಕೆ ಕರೆಸಿಕೊಂಡು, ಬಳಿಕ ತ್ರಿಶೂರ್​ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net