

ಕಂದಹಾರ್ : ಆಫ್ಘಾನಿಸ್ತಾನದ ಹೊಸ ಪ್ರದೇಶಗಳನ್ನು ತಾಲಿಬಾನ್ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಭಾರತ, ಕಂದಹಾರ್ನಲ್ಲಿರುವ ತನ್ನ ದೂತಾವಾಸ(ಕಾನ್ಸುಲೇಟ್)ದ ಸುಮಾರು 50 ಡಿಪ್ಲೋಮಾಟ್ಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುತ್ತಿದೆ ಎನ್ನಲಾಗಿದೆ.
ಐಎಎಫ್ನ ವಿಶೇಷ ವಿಮಾನವೊಂದನ್ನು ಶನಿವಾರ ಕಂದಹಾರ್ಗೆ ಕಳುಹಿಸಲಾಗಿದ್ದು, ಅಲ್ಲಿರುವ ಭಾರತೀಯ ಡಿಪ್ಲೋಮ್ಯಾಟ್ಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಇಂಡೋಟಿಬೆಟನ್ ಬಾರ್ಡರ್ ಪೊಲೀಸರ ತಂಡವನ್ನು ತೆರವುಗೊಳಿಸಲಾಗುವುದು. ಭಾರತೀಯ ಕಾನ್ಸುಲೇಟನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಅಮೆರಿಕವು ತನ್ನ ಪಡೆಗಳನ್ನು ಆಗಸ್ಟ್ ವೇಳೆಗೆ ಹಿಂತೆಗೆಯುವ ಬಗ್ಗೆ ಚಿಂತಿಸುತ್ತಿರುವಂತೆಯೇ, ಹಲವು ಆತಂಕವಾದಿ ದಾಳಿಗಳು ನಡೆಯುತ್ತಿವೆ. ಅಫ್ಘಾನಿಸ್ತಾನದ 421 ಜಿಲ್ಲೆಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಒಂದನೇ ಮೂರರಷ್ಟು ಪ್ರದೇಶಗಳನ್ನು ಈಗ ತಾಲಿಬಾನ್ ನಿಯಂತ್ರಿಸುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)