ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿದಕ್ಕೆ ಭಾರತೀಯ ಉದ್ಯಮಿ ಹತ್ಯೆ! | Urinating

Bbau - 2025-10-30T124727.393
Published on

ಕೆನಡಾ: ಅಪರಿಚಿತ ವ್ಯಕ್ತಿಯೊಬ್ಬ ಕಾರಿನ ಮೇಲೆ ಮೂತ್ರ( Urinating) ವಿಸರ್ಜನೆ ಮಾಡಿದ್ದರಿಂದ ಪ್ರಶ್ನೆ ಮಾಡಿದ ಭಾರತೀಯ ಮೂಲದ ಉದ್ಯಮಿಯೊಬ್ಬರನ್ನು ಹತ್ಯೆ ಮಾಡಿದ ಘಟನೆ ಕೆನಡಾದ ಎಡ್ಮಂಟನ್​ನಲ್ಲಿ ಇತ್ತೀಚಿಗೆ ನಡೆದಿದೆ.

ಉದ್ಯಮಿ ಅರ್ವಿ ಸಿಂಗ್​ ಸಾಗೂ ಮೃತ. ಆರೋಪಿಯನ್ನು 40 ವರ್ಷದ ಕೈಲ್ ಪ್ಯಾಪಿನ್ ಎಂದು ಗುರುತಿಸಲಾಗಿದ್ದು, ಹಲ್ಲೆಗೆ ಸಂಬಂಧಿಸಿದಂತೆ ಎಡ್ಮಂಟನ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಘಟನೆ ಏನು?

ಅಕ್ಟೋಬರ್ 19 ರಂದು ಅರ್ವಿ ಸಿಂಗ್ ಸಾಗೂ ಮತ್ತು ಅವರ ಗೆಳತಿ ಊಟದ ನಂತರ ತಮ್ಮ ಕಾರಿಗೆ ಹಿಂತಿರುಗುತ್ತಿದ್ದಾಗ ಅಪರಿಚಿತ ವ್ಯಕ್ತಿ ತಮ್ಮ ವಾಹನದ ಮೇಲೆ ಮೂತ್ರ ವಿಸರ್ಜಿಸುತ್ತಿರುವುದನ್ನು ಅವರು ನೋಡಿದ್ದಾರೆ. "ಹೇ, ನೀವು ಏನು ಮಾಡುತ್ತಿದ್ದೀರಿ?" ಎಂದು ಅರ್ವಿ ಅಪರಿಚಿತನನ್ನು ಕೇಳಿದನು, ಆ ವ್ಯಕ್ತಿ "ನನಗೆ ಏನು ಬೇಕೋ ಅದು" ಎಂದು ಉತ್ತರಿಸಿದನು ಮತ್ತು ನಂತರ ಸಾಗೂ ಬಳಿಗೆ ಹೋಗಿ ಅವನ ತಲೆಗೆ ಹೊಡೆದನು.

ತಕ್ಷಣಕ್ಕೆ ಅವರ ಗೆಳತಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯದ್ದರು. ಅಲ್ಲದೆ, ICU ನಲ್ಲಿ ದಾಖಲಿಸಲಾಯಿತು. ಆದರೆ, ವೈದ್ಯರ ಪ್ರಯತ್ನಗಳ ಹೊರತಾಗಿಯೂ, ದಾಳಿಯ ಐದು ದಿನಗಳ ನಂತರ ಅಕ್ಟೋಬರ್ 24 ರಂದು ಅವರು ಮೃತಪಟ್ಟಿದ್ದಾರೆ ಎಂದು ಇದೀಗ ವರದಿಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net