ಎಂಬಿಬಿಎಸ್ ಪಾಸಾದವರಿಗೆ ಭಾರತೀಯ ಸೇನೆಯಲ್ಲಿ ಅವಕಾಶ

Indian Army
Published on

ನವದೆಹಲಿ: ಭಾರತೀಯ ಸೇನೆ ಶಾರ್ಟ್ ಸರ್ವೀಸ್ ಕಮಿಷನ್ಡ್ ಆಫೀಸರ್ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳಿಗಾಗಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಒಟ್ಟು 300 (ಪುರುಷ -270 ಹುದ್ದೆ ಹಾಗೂ ಮಹಿಳಾ- 30) ಹುದ್ದೆಗಳಿವೆ.
ಎಂಬಿಬಿಎಸ್ ಪದವಿಯನ್ನು ಒಂದು ಅಥವಾ ಎರಡನೇ ಪ್ರಯತ್ನದಲ್ಲಿ ಪಾಸಾದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.  ಅಭ್ಯರ್ಥಿಗಳು amcsscentry.gov.in ನಲ್ಲಿ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಅಧಿಕೃತ ಸೈಟ್ ಮೂಲಕ ಹುದ್ದೆಗೆ
ಆಗಸ್ಟ್ 16 ರವರೆಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ವೆಬ್​ಸೈಟ್ http://www.amcsscentry.gov.in ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net