ಶಿವಮೊಗ್ಗದಲ್ಲಿ ಭಾರತಿಯ ಭೂ ಸೇನಾ ದಿವಸ್ ಆಚರಣೆ

soldiers
ಭೂ ಸೇನಾ ದಿನದ ಅಂಗವಾಗಿ ಶಿವಮೊಗ್ಗದ ಸೈನಿಕ ಪಾರ್ಕ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಸಿ.ಎ.ಹಿರೇಮಠ, ಪಿ.ವಿ.ಕೃಷ್ಣಾರೆಡ್ಡಿ, ಎಚ್.ಸಿ.ಯೋಗೇಶ್, ವೆಂಕಟೇಶ ರಾವ್, ಕೆ.ಎಸ್.ಉದಯ, ಉಮೇಶ್ ಬಾಪಟ್, ಕೆ.ಟಿ.ವಿಜಯ್ ಇದ್ದರು.
Published on

ಶಿವಮೊಗ್ಗ: ಸ್ವಾತಂತ್ರದ ನಂತರ ಬ್ರಿಟಿಷರಿಂದ ಭಾರತೀಯ ಸೇನೆಯ ಪೂರ್ಣ ಅಧಿಕಾರವನ್ನು ಅಂದಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಹಸ್ತಾಂತರಿಸಿದ ದಿನವನ್ನು ಭಾರತೀಯ ಭೂ ಸೇನಾ ದಿವಸವನ್ನಾಗಿ ಆಚರಿಸಲಾಗುತ್ತದೆ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಿ.ವಿ.ಕೃಷ್ಣಾರೆಡ್ಡಿ ಹೇಳಿದರು.

ನಗರದ ಸೈನಿಕ ಪಾರ್ಕ್‌ನಲ್ಲಿ ಬುಧವಾರ ಭೂ ಸೇನಾ ದಿನದ ಅಂಗವಾಗಿ ಸೈನಿಕರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಭಾರತೀಯ ಸೇನೆಯು ವೈರಿ ರಾಷ್ಟ್ರಗಳೊಂದಿಗೆ ಯುದ್ಧಗಳನ್ನು ಎದುರಿಸಿದ ರೀತಿ, ದಿಟ್ಟತನ, ಮೂರೂ ಪಡೆಗಳ ನಡುವೆ ಉತ್ತಮ ಸಮನ್ವಯಕ್ಕಾಗಿ ಓರ್ವ ಅತ್ಯುನ್ನತ ಸೇನಾಧಿಕಾರಿಯನ್ನು ನೇಮಕ ಮಾಡಿದ್ದು ಈಗ ಇತಿಹಾಸ ಎಂದರು.

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಸಿ.ಎ.ಹಿರೇಮಠ ಮಾತನಾಡಿ, ಭಾರತೀಯ ಸೇನೆಯಲ್ಲಿ ಸಕ್ರಿಯವಾಗಿ ಯುದ್ಧಗಳಲ್ಲಿ ಬಳಸಿದ್ದ ಸೇನಾ ಟ್ಯಾಂಕರ್‌ನ್ನು ಫ್ರೀಡಂಪಾರ್ಕ್‌ನಲ್ಲಿ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್ ಮಾತನಾಡಿ, ಇಂದಿನ ನಮ್ಮ ಜೀವನ ಆತಂಕಮುಕ್ತವಾಗಿದೆ ಎಂದರೆ ಅದಕ್ಕೆ ಸೈನಿಕರು ಹಾಗೂ ಹುತಾತ್ಮ ಸೈನಿಕರು ಕಾರಣ. ಜ.26ರಂದು ಗಣರಾಜ್ಯೋತ್ಸವ ಸಂದರ್ಭದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಯುದ್ದ ಟ್ಯಾಂಕರ್ ಅನಾವರಣಗೊಳಿಸುವುದು ಕಷ್ಟವಾಗಬಹುದು. ಅದಕ್ಕಾಗಿ ಇನ್ನೊಂದು ದಿನ ನಿಗದಿ ಮಾಡಬಹುದಾಗಿದೆ ಎಂದರು.

ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ವೆಂಕಟೇಶ್ ರಾವ್, ಪ್ರಧಾನ ಕಾರ್ಯದರ್ಶಿ ಉಮೇಶ್ ಬಾಪಟ್, ಪದಾಧಿಕಾರಿಗಳಾದ ಸತ್ಯನಾರಾಯಣ, ಕೆ.ಎಸ್.ಉದಯ , ವಿ.ಎನ್ ಮೂರ್ತಿ, ಎಂ.ಆರ್ ಹೆಗಡೆ, ನೇಮೋಜಿ, ರಘುನಾಥ್, ಕೆ.ಟಿ.ವಿಜಯ್, ತಮ್ಮಯ್ಯ, ಸಂತೃಪ್ತ ಕುಮಾರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net