ಭಾರತ ಸಶಸ್ತ್ರ ಪಡೆ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ; ಆಪರೇಷನ್ ಸಿಂಧೂರ್ ಇದನ್ನು ಸಾಬೀತುಪಡಿಸಿದೆ; ಅಮಿತ್ ಶಾ| amit-shah

amithshah
Published on

ಮುಂಬೈ: ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಭದ್ರತೆಯ ಬಗ್ಗೆ ದೇಶದ ದೃಢನಿಶ್ಚಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಶಸ್ತ್ರ ಪಡೆಗಳು, ನಾಗರಿಕರು ಮತ್ತು ಗಡಿಗಳ ವಿಷಯಕ್ಕೆ ಬಂದಾಗ ಯಾವುದೇ ರಾಜಿ ಸಾಧ್ಯವಿಲ್ಲ ಎಂದು ಅಮಿತ್​ಶಾ ಒತ್ತಿ ಹೇಳಿದ್ದಾರೆ.

ಆಪರೇಷನ್ ಸಿಂಧೂರ್ ಜಗತ್ತಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ ಎಂದು ಶಾ ಹೇಳಿದರು. ಭಾರತೀಯ ಸೇನೆಗೆ ಅಥವಾ ಗಡಿಗಳಿಗೆ ಬೆದರಿಕೆ ಹಾಕುವ ಯಾರಾದರೂ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರತಿಕ್ರಿಯೆಯಾಗಿ ಭಾರತ ಕೈಗೊಂಡ ಪ್ರತೀಕಾರದ ಕ್ರಮಗಳ ಸರಣಿಯನ್ನು ಅವರು ವಿವರಿಸಿದರು. ಅದರಲ್ಲೂ ವಿಶೇಷವಾಗಿ ಇತ್ತೀಚಿನ ವರ್ಷಗಳಲ್ಲಿ ದೇಶದ ರಕ್ಷಣಾ ಕಾರ್ಯತಂತ್ರವನ್ನು ಪುನರೂಪಿಸಿದ ಮಹತ್ವದ ಕಾರ್ಯಾಚರಣೆಗಳನ್ನು ಎತ್ತಿ ತೋರಿಸಿದರು.

ಭಾರತದಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ಕೆಲವು ಗಮನಾರ್ಹ ಪ್ರತಿಕ್ರಿಯೆಗಳನ್ನು ಅಮಿತ್ ಶಾ ನೆನಪಿಸಿಕೊಂಡರು. ಅವರು ಉರಿಯಲ್ಲಿ ನಮ್ಮ ಮೇಲೆ ದಾಳಿ ಮಾಡಿದರು, ಮತ್ತು ನಾವು ಸರ್ಜಿಕಲ್ ಸ್ಟ್ರೈಕ್ ಮೂಲಕ ಪ್ರತೀಕಾರ ತೀರಿಸಿಕೊಂಡೆವು. ಅವರು ಪುಲ್ವಾಮಾದಲ್ಲಿ ನಮ್ಮ ಮೇಲೆ ದಾಳಿ ಮಾಡಿದರು, ಮತ್ತು ನಾವು ವೈಮಾನಿಕ ದಾಳಿ ನಡೆಸಿದ್ದೇವೆ. ಬಳಿಕ ಭಯೋತ್ಪಾದಕರು ಪಹಲ್ಗಾಮ್​ಅನ್ನು ಗುರಿಯಾಗಿಸಿಕೊಂಡಾಗ ನಾವು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದೆವು. ಅದು ಅವರ ಭಯೋತ್ಪಾದಕ ತಾಣಗಳನ್ನು ನಾಶಮಾಡಿತು ಎಂದು ಭಾರತದ ರಕ್ಷಣಾ ನೀತಿಯಲ್ಲಿನ ಬದಲಾವಣೆಯನ್ನು ಒತ್ತಿ ಹೇಳಿದರು.

(ಏಜೆನ್ಸೀಸ್)

ಛತ್ತೀಸ್‌ಗಢದಲ್ಲಿ ನಮ್ಮ ಸಿಆರ್‌ಪಿಎಫ್, ಛತ್ತೀಸ್‌ಗಢ ಪೊಲೀಸರು ಮತ್ತು ಬಿಎಸ್‌ಎಫ್ ಪಡೆಗಳು 5000 ಅಡಿ ಎತ್ತರದಲ್ಲಿರುವ ನಕ್ಸಲ್ ಕೇಂದ್ರಗಳನ್ನು ನಾಶಪಡಿಸಿವೆ, ಇದರ ಪರಿಣಾಮವಾಗಿ 31 ನಕ್ಸಲರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ 36 ನಕ್ಸಲರು ಸಾವನ್ನಪ್ಪಿದ್ದಾರೆ, ಇನ್ನೂ ಅನೇಕರು ಶರಣಾಗಿದ್ದಾರೆ ಎಂದು ಶಾ ಬಹಿರಂಗಪಡಿಸಿದರು. ಭಾರತದಿಂದ ನಕ್ಸಲಿಸಂಅನ್ನು ನಿರ್ಮೂಲನೆ ಮಾಡಲು ನಾವು ಬದ್ಧರಾಗಿದ್ದೇವೆ ಮತ್ತು ಮಾರ್ಚ್ 31, 2026 ರೊಳಗೆ ಅದನ್ನು ಕೊನೆಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಸ್ಪಷ್ಟ ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net