ಅಮೆರಿಕದ ರಾಷ್ಟ್ರೀಯ ವಿಜ್ಞಾನ ಮಂಡಳಿಗೆ ಭಾರತೀಯನ ನೇಮಕ

us appoint
Published on

ನ್ಯೂಯಾರ್ಕ್‌: ಅಮೆರಿಕ ರಾಷ್ಟ್ರೀಯ ವಿಜ್ಞಾನ ಮಂಡಳಿಗೆ ಭಾರತೀಯ ಮೂಲಕ ವಿಜ್ಞಾನಿ ಸುದರ್ಶನಂ ಬಾಬು ಅವರನ್ನು ನೇಮಕ ಮಾಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶ ಹೊರಡಿಸಿದ್ದಾರೆ. ಈ ಮೂಲಕ, ವಿಶ್ವವಿಖ್ಯಾತವಾಗಿರುವ ಈ ಮಂಡಳಿಗೆ ಆಯ್ಕೆ ಆಗಿರುವ ಮೂರನೆಯ ಭಾರತೀಯರು ಎನಿಸಿಕೊಂಡಿದ್ದಾರೆ ಸುದರ್ಶನಂ.

ಪ್ರತಿಷ್ಠಿತ ಓಕ್ ರಿಡ್ಜ್ ರಾಷ್ಟ್ರೀಯ ಪ್ರಯೋಗಾಲಯದಲ್ಲಿ (ಒಆರ್‌ಎನ್‌ಎಲ್) ಕರ್ತವ್ಯ ನಿರ್ವಹಿಸುತ್ತಿದ್ದ ಸುದರ್ಶನಂ ಮುಂದಿನ ಆರು ವರ್ಷಗಳ ಅವಧಿಗೆ ರಾಷ್ಟ್ರೀಯ ವಿಜ್ಞಾನ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಸುದರ್ಶನ ಬಾಬು ಅವರು 1988ರಲ್ಲಿ ಐಐಟಿ-ಮದ್ರಾಸ್‌ನಿಂದ ಮಾಸ್ಟರ್ ಆಫ್ ಟೆಕ್ನಾಲಜಿ (ಇಂಡಸ್ಟ್ರಿಯಲ್ ಮೆಟಲರ್ಜಿ - ವೆಲ್ಡಿಂಗ್) ಮತ್ತು 1986ರಲ್ಲಿ ಕೊಯಮತ್ತೂರಿನ ಪಿಎಸ್‌ಜಿ ಕಾಲೇಜ್ ಆಫ್ ಟೆಕ್ನಾಲಜಿಯಿಂದ ಇಂಜನಿಯರಿಂಗ್ (ಇಟಾಲರ್ಜಿ) ಪದವಿ ಗಳಿಸಿದ್ದಾರೆ. ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಮಟೀರಿಯಲ್ ಸೈನ್ಸ್ ಮತ್ತು ಮೆಟಲರ್ಜಿ ವಿಷಯದಲ್ಲಿ ಪಿಎಚ್‌ಡಿ ಪದವಿ ಕೂಡ ಪಡೆದಿದ್ದಾರೆ. ಪ್ರಸ್ತುತ ಬ್ರೆಡಿಸೆನ್ ಸೆಂಟರ್ ಫಾರ್ ಇಂಟರ್ ಡಿಸಿಪ್ಲೀನರಿ ರಿಸರ್ಚ್ ಆ್ಯಂಡ್ ಗ್ರಾಜುಯೇಟ್ ಎಜುಕೇಶನ್‌ನ ನಿರ್ದೇಶಕರಾಗಿದ್ದಾರೆ.

ಪರಿಸರ ವ್ಯವಸ್ಥೆಯಲ್ಲಿ ಸಂಶೋಧನೆ ಕೈಗೊಳ್ಳುವುದು, ಕೈಗಾರಿಕೆಗಳ ಉತ್ಪಾದನೆಯ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವುದರ ಜತೆಗೆ, ಅದಕ್ಕೆ ಸಂಬಂಧಿಸಿದಂತೆ ಪರಿಹಾರಗಳನ್ನು ಒದಗಿಸುವುದು ಹಾಗೂ ಇಂಧನ ಇಲಾಖೆಯ ಉತ್ಪಾದನಾ ಸಾಮರ್ಥ್ಯದ ಹೆಚ್ಚಳ ಕುರಿತಂತೆ ಇವರು ಈಗ ಕಾರ್ಯ ನಿರ್ವಹಿಸಲಿದ್ದಾರೆ.

ಇವರಿಗಿಂತ ಮುಂಚೆ ಭಾರತದ ಸೇತುರಾಮ್‌ ಪಂಚನಾಥನ್ ಸುರೇಶ್ ವಿ ಗರಿಮೆಲ್ಲಾ.ಮಂಡಳಿಯ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ್ದರು. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net