ಭಾರತ ಭೇಟಿ ಅದ್ಭುತ, ಫಲಪ್ರದ

donal trump
Published on

ನವದೆಹಲಿ: ಎರಡು ದಿನಗಳ ಭಾರತ ಭೇಟಿ ಅದ್ಭುತವಾಗಿತ್ತು ಮತ್ತು ಫಲಪ್ರದವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸೋಮವಾರ ಮತ್ತು ಮಂಗಳವಾರ ಭಾರತ ಪ್ರವಾಸ ಮುಗಿಸಿ ಅಮೆರಿಕಕ್ಕೆ ಹಿಂದಿರುಗಿರುವ ಟ್ರಂಪ್ ಭೇಟಿ ಕುರಿತು ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಶ್ವೇತಭವನ ಕೂಡ ಪ್ರಕಟಣೆ ಹೊರಡಿಸಿದ್ದು, ಈ ಭೇಟಿ ಅಮೆರಿಕ ಮತ್ತು ಭಾರತದ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಟ್ಟಿಗೊಳಿಸಿದೆ ಎಂದು ಹೇಳಿದೆ. ಎರಡೂ ದೇಶಗಳಲ್ಲಿ ಸಮೃದ್ಧಿ, ಹೂಡಿಕೆ ಮತ್ತು ಉದ್ಯೋಗಗಳು ಸೃಷ್ಟಿಗೆ ಕಾರಣವಾಗುವ ಬಲವಾದ ಆರ್ಥಿಕ ಸಂಬಂಧಗಳಿಂದ ಅಮೆರಿಕ ಮತ್ತು ಭಾರತ ಲಾಭ ಪಡೆಯಲಿವೆ. ಭಾರತಕ್ಕೆ ಇಂಧನ ರಫ್ತು ಗಣನೀಯವಾಗಿ ಹೆಚ್ಚಿದೆ ಎಂದು ತಿಳಿಸಿದೆ.

ಭಾರತ ಖಾದ್ಯ ಇಷ್ಟಪಟ್ಟ ಟ್ರಂಪ್ ಕುಟುಂಬ: ಭಾರತ ಭೇಟಿ ವೇಳೆ ಟ್ರಂಪ್ ಕುಟುಂಬ ಊಟದಲ್ಲಿ ಅತಿ ಹೆಚ್ಚು ನಾನ್ ಮತ್ತು ಸಿಕಂದರಿ ರಾನ್ ಅನ್ನು ಇಷ್ಟಪಟ್ಟಿತು ಎಂದು ಅವರು ಉಳಿದುಕೊಂಡಿದ್ದ ದೆಹಲಿಯ ಐಟಿಸಿ ಮೌರ್ಯ ಹೋಟೆಲ್​ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜತೆಗೆ ರೋಸ್ಟೆಡ್ ಮಟನ್ ಲೆಗ್​ನ್ನು ಟ್ರಂಪ್ ದಂಪತಿ ಹೆಚ್ಚು ಇಷ್ಟಪಟ್ಟರು ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net