

ಮುಂಬೈ: ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಆರ್ಟ್ಸ್ ವಿಜೇತ ನಟ ಹಗ್ ಗ್ರಾಂಟ್(Hugh Grant) 1988ರಲ್ಲಿ ಫ್ರೆಂಚ್ ಸಿನಿಮಾದ ಚಿತ್ರೀಕರಣಕ್ಕಾಗಿ ಭಾರತಕ್ಕೆ ಭೇಟಿ ಸಮಯವನ್ನು ನೆನಪಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ನಡೆದ ಆಶ್ಚರ್ಯಕರ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತ ಹಗ್ ಗ್ರಾಂಟ್ 1998ರಲ್ಲಿ ನನಗೆ ಭಾರತ ಒಂದು ವಿಚಿತ್ರ ಸ್ಥಳವಾಗಿತ್ತು ಎಂದು ಹೇಳಿದ್ದಾರೆ. ಅಲ್ಲದೆ ಭಾರತದಲ್ಲಿ ತಮಗಾದ ಆಶ್ಚರ್ಯದ ವಿಷಯವನ್ನು ಹಂಚಿಕೊಂಡಿದ್ದಾರೆ. ನನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ಅಂದರೆ 20ರ ದಶಕದಲ್ಲಿ ಕೆಲವು ವಿಚಿತ್ರ ಚಲನಚಿತ್ರಗಳನ್ನು ಮಾಡಿದ್ದೇನೆ. ಅದರಲ್ಲಿ ಒಂದು ಫ್ರೆಂಚ್ ಸಿನಿಮಾವನ್ನು ಭಾರತದಲ್ಲಿ ಚಿತ್ರೀಕರಿಸಲಾಗಿದೆ.
1998ರಲ್ಲಿ ನಾನು ಕೊಲ್ಕತಾಗೆ ತೆರಳಿದ್ದೆ. ಅಲ್ಲಿ ಹೋದಾಗ ಎಲ್ಲರೂ ತಮ್ಮ ಬ್ಯಾಗ್ಗಳನ್ನು ಎತ್ತಿಕೊಂಡು ಹೋಗುತ್ತಿದ್ದರು. ನಾನು ನನ್ನ ಬ್ಯಾಗ್ನೊಂದಿಗೆ ಹೊರನಡೆದೆ. ಚಿಕ್ಕ ಹುಡುಗ ನನ್ನ ಬಳಿ ಬಂದು ಹಲೋ ಸರ್, ನಾನು ನಿಮ್ಮ ಡ್ರೈವರ್ ಎಂದು ಹೇಳಿದ. 11 ವರ್ಷದ ಹುಡುಗನ ಮಾತು ಕೇಳಿ ನನಗೆ ಆಶ್ಚರ್ಯವಾಯಿತು.
ಬಳಿಕ ನಿಮಗೆ ಖಚಿತವಾಗಿದೆಯೇ ಎಂದುನಾನು ಕೇಳಿದೆ. ಅದಕ್ಕೆ ಉತ್ತರಿಸಿದ ಅವರು ಹೌದು ಸರ್, ಇಡೀ ಸಿನಿಮಾದ ಶೂಟಿಂಗ್ ಮುಗುಯುವವರೆಗೂ ನಾನೇ ಚಾಲಕ ಎಂದು ಹೇಳಿದರು. ಓಹ್, ನೀವು ಡ್ರೈವ್ ಮಾಡಬಹುದದೆ ಎಂದು ನಾನು ಹೇಳಿದೆ. ನನಗೆ ನನ್ನ ಅನುಮಾನವಿತ್ತು, ಆದರೆ ಅವನು ನಾಲ್ಕು ದಿನ ಚಾಲಕನ ಕೆಲಸ ಮಾಡಿದ. ದುರದೃಷ್ಟವಶಾತ್ ಅಪಘಾತದಿಂದಾಗಿ ಹುಡುಗ ತನ್ನ ಕೆಲಸವನ್ನು ಕಳೆದುಕೊಂಡ ಎಂದು ಹೇಳಿದರು.
ಹೀಗೆ ಭಾರತದಲ್ಲಿ ಸುತ್ತಾಡುವಾಗ ಸುಮಾರು ಎರಡು ತಿಂಗಳ ನಂತರ ಆ ಚಾಲಕನ ಭೇಟಿಯಾಯಿತು. ಕೊಲ್ಕತಾದ ರಸ್ತೆಯಲ್ಲಿ ನಾನು ಅವರನ್ನು ಮಾತನಾಡಿಸಿ ನೀವು ಹೇಗಿದ್ದೀರಿ ಎಂದು ಕೇಳಿದೆ. ಅದಕ್ಕೆ ಅವರು ಸರ್ ನಾನು ಚೆನ್ನಾಗಿದ್ದೇನೆ, ಈಗ ಶಾಲಾ ಬಸ್ ಓಡಿಸುತ್ತಿದ್ದೇನೆ ಎಂದು ಹೇಳುತ್ತ ನಕ್ಕರು ಎಂದು ತಿಳಿಸಿದರು. ಸಂದರ್ಶನದಲ್ಲಿ ಈ ಘಟನೆಯು ಇದು ಒಂದು ಸಣ್ಣ ಜಗತ್ತು, ಸನ್ನಿವೇಶಗಳು ಎಷ್ಟು ಬೇಗನೆ ಬದಲಾಗಬಹುದು ಎಂಬುದನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. 14 ಫೆಬ್ರವರಿ 2025ರಂದು ಥಿಯೆಟರ್ಗಳಲ್ಲಿ ಬಿಡುಗಡೆಯಾಗಲಿರುವ 'ಬ್ರಿಡ್ಜೆಟ್ ಜೋನ್ಸ್: ಮ್ಯಾಡ್ ಅಬೌಟ್ ದಿ ಬಾಯ್'ನಲ್ಲಿ ಹಗ್ ಗ್ರಾಂಟ್ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)