ವಿದ್ಯಾಥಿರ್ಗಳ ಸಂಟನೆಗಳು ಬಲಗೊಳ್ಳಲಿ; ಸಾಹಿತಿ ಸತೀಶ

oppo_0
oppo_0
Published on

ಹಾವೇರಿ: ಎಸ್​ಎಫ್​ಐ ಭದ್ರ ಬುನಾದಿ ಸೈದ್ಧಾಂತಿಕ ನಿಲ್ಲುವ ಹೊಂದಿರುವ ಸಂಘಟನೆ. ಜೀವನ ಪರವಾಗಿ, ಜೀವ ಪರವಾಗಿ, ಸಮಾಜದ ಪರವಾಗಿ ಕೆಲಸ ಮಾಡುತ್ತದೆ. ಅಂತಹ ಸಿದ್ಧಾಂತ ಇಟ್ಟುಕೊಂಡು ನೆಲ್ಲಗಟ್ಟಿನ ಮೇಲೆ ಹೋರಾಟ ಮಾಡುತ್ತಿರುವ ಎಸ್​ಎಫ್​ಐ ಸಂಘಟನೆಯಲ್ಲಿ ಹೆಚ್ಚು ಹೆಚ್ಚು ವಿದ್ಯಾಥಿರ್ಗಳು ಬರಬೇಕು ಎಂದು ಹಿರಿಯ ಸಾಹಿತಿ ಸತೀಶ ಕುಲಕಣಿರ್ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾರತ ವಿದ್ಯಾಥಿರ್ ಫೆಡರೇಶನ್​ ಜಿಲ್ಲಾ ಸಮಿತಿ ಶನಿವಾರ ಆಯೋಜಿಸಿದ್ದ 8ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈಚಾರಿಕ ಶಿಕ್ಷಣ ಹೋರಾಟ ಜೊತೆ ಜೊತೆಗೆ ಸಾಗಲಿ. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ತಂದೆ ತಾಯಿಗಳ ಅಭಿಲಾಷ ಈಡೇರಿಸಬೇಕು. ಪಠ್ಯೇತರ ಚಟುವಟಿಕೆಗಳನ್ನು ಮಾಡಬೇಕು. ವಿದ್ಯಾಥಿರ್ -ಯುವಜನರ ದೇಶವನ್ನು, ಸಮಾಜವನ್ನು ನೋಡು ದೃಷ್ಟಿ ಕೋನ ಬೇರೆಯಾಗಿರುತ್ತದೆ. ಬಹಳಷ್ಟು ಬದಲಾವಣೆವಾಗಿರುತ್ತೆ ತಪ್ಪು ಸರಿಯೋ ಎಂಬ ವೈಚಾರಿಕ ನಿಲವು ಬೆಳೆಯುತ್ತದೆ. ಓದುವಿನ ಜೊತೆಗೆ ಹೋರಾಟದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಡಿವೈಎಫ್​ಐ ಜಿಲ್ಲಾ ಸಂಚಾಲಕ ನಾರಾಯಣ ಕಾಳೆ, ಎಸ್​ಎ್​ಐ ರಾಜ್ಯಾಧ್ಯಕ್ಷ ಅಮರೇಶ್​ ಕಡಗದ, ಮಾಜಿ ಜಿಲ್ಲಾಧ್ಯಕ್ಷೆ ರೇಣುಕಾ ಕಹಾರ, ಎಸ್​ಎಫ್​ಐ ಜಿಲ್ಲಾ ಸಹ ಕಾರ್ಯದಶಿರ್ ಬಸವರಾಜ ಎಸ್​., ಶೃತಿ ಆರ್​.ಎಂ., ಕೀರ್ತನಾ ಹಿರಿಯಕ್ಕನವರ, ಎಸ್​ಎಫ್​ಐ ಮುಖಂಡರಾದ ದುರುಗಪ್ಪ ಯಮ್ಮಿಯವರ, ಸುಲೇಮಾನ್​ ಮತ್ತಿಹಳ್ಳಿ, ದೇವರಾಜ ಅಕ್ಕಸಾಲಿ, ಅಣ್ಣಪ್ಪ ಕೊರವರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net