ಭಾರತ-ಯುಎಇ ಐತಿಹಾಸಿಕ ವ್ಯಾಪಾರ ಒಪ್ಪಂದ

dfgsdfasd
Published on

ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ಮೇ 1ರಿಂದ ಚಾಲ್ತಿಗೆ ಬರಲಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಬು ಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಮೊಹಮದ್ ಬಿನ್ ಝುಯೇದ್ ಅಲ್ ನಹ್ಯಾನ್ ನಡುವೆ ಫೆ.18ರಂದು ನಡೆದ ವರ್ಚುವಲ್ ಸಭೆಯ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಅಂಕಿತ ಬಿದ್ದಿತ್ತು.

1. ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯೆಲ್ ಮತ್ತು ಯುಎಇನ ಆರ್ಥಿಕ ಸಚಿವ ಅಬ್ದುಲ್ಲಾ ಬಿನ್ ತೌಕ್ ಅಲ್ ಮರ್ರಿ ಈ ಒಪ್ಪಂದಕ್ಕೆ ಸಹಿ ಹಾಕಿ ವಿನಿಮಯ ಮಾಡಿಕೊಂಡರು.

2. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಭಾರತ ಮತ್ತು ಯುಎಇ ನಡುವಿನ ವ್ಯಾಪಾರವನ್ನು ಈ ಒಪ್ಪಂದವು 60 ಶತಕೋಟಿ ಡಾಲರ್​ನಿಂದ 100 ಶತಕೋಟಿ ಡಾಲರ್​ಗೆ ಏರಿಸಲಿದೆ ಎಂದು ಯುಎಇನಲ್ಲಿರುವ ಭಾರತದ ರಾಯಭಾರಿ ಸಂಜಯ್ ಸುಧೀರ್ ಹೇಳಿದರು.

3. ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ)ವನ್ನು ದಾಖಲೆಯ 88 ದಿನಗಳಲ್ಲಿ ಅಂತಿಮಗೊಳಿಸಿ ಸಹಿ ಹಾಕಲಾಗಿದೆ ಎಂದು ಖಲೀಜ್ ಟೈಮ್್ಸ ವರದಿ ಮಾಡಿದೆ.

4. ಭಾರತ ಮತ್ತು ಯುಎಇನ ದ್ವಿಪಕ್ಷೀಯ ವ್ಯಾಪಾರ 2020-21ರಲ್ಲಿ 43.3 ಶತಕೋಟಿ ಡಾಲರ್ ಆಗಿತ್ತು. ರಫ್ತು ಪ್ರಮಾಣ 16.7 ಶತಕೋಟಿ ಡಾಲರ್, ಆಮದು ಪ್ರಮಾಣ 26.7 ಶತಕೋಟಿ ಡಾಲರ್ ಇತ್ತು. 2019-20ರಲ್ಲಿ ಉಭಯ ರಾಷ್ಟ್ರಗಳ ವಾಣಿಜ್ಯ ವಹಿವಾಟು 59.11 ಶತಕೋಟಿ ಡಾಲರ್ ಇತ್ತು.

ಹೊಸ ಯುಗದ ಅವಕಾಶವನ್ನು ಬಳಸಲು ನೀವು ಸಿದ್ಧವಾಗಿದ್ದೀರಾ? ಮೇ 1ರಿಂದ ಚಾಲ್ತಿಗೆ ಬರುತ್ತಿದೆ. ಇಳಿಕೆ ಮಾಡಲ್ಪಟ್ಟ ಟಾರಿಫ್​ಗಳು, ವ್ಯಾಪಾರಕ್ಕೆ ಸಂಬಂಧಿಸಿದ ಅಡೆತಡೆಗಳನ್ನು ನಿವಾರಿಸಲಾಗಿದ್ದು, ಜಗತ್ತಿನ ಆರನೇ ಅತಿದೊಡ್ಡ ಅರ್ಥವ್ಯವಸ್ಥೆಗೆ ನಮ್ಮ ರಫ್ತುದಾರರಿಗೆ ಪ್ರವೇಶ ಸಿಗುತ್ತಿದೆ.

| ಥನಿ ಅಲ್ ಝೆಯೌದಿ ಯುಎಇನ ವಿದೇಶಾಂಗ ವ್ಯಾಪಾರ ಖಾತೆ ರಾಜ್ಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net