ಭಾರತದಲ್ಲಿ ಒಂದೇ ದಿನ 3,824 ಕೋವಿಡ್ ಕೇಸ್; ಇದು ಈ ವರ್ಷದಲ್ಲೇ ಒಂದು ದಿನದ ಅತ್ಯಧಿಕ ಪ್ರಕರಣ

Covid
Published on

ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಚುನಾವಣೆ ಕಾವೇರುತ್ತಿದ್ದರೆ, ಮತ್ತೊಂದೆಡೆ ದೇಶದಲ್ಲಿ ಕೋವಿಡ್​ ಸೋಂಕಿನ ಪ್ರಕರಣಗಳಲ್ಲಿ ಏರಿಕೆ ಆಗುತ್ತಿದೆ. ಅದರಲ್ಲೂ ಈ ವರ್ಷದಲ್ಲೇ ಇದುವರೆಗಿನ ಒಂದು ದಿನದ ಅತ್ಯಧಿಕ ಪ್ರಕರಣ ಎನಿಸಿಕೊಂಡಿದೆ.

ಭಾನುವಾರದ ಅಂಕಿ-ಅಂಶದ ಪ್ರಕಾರ ದೇಶದಲ್ಲಿ ಒಂದೇ ದಿನದಲ್ಲಿ 3,824 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಇದು ಕಳೆದ ಆರು ತಿಂಗಳಲ್ಲಿ ಅರ್ಥಾತ್ 184 ದಿನಗಳಲ್ಲಿ ಗರಿಷ್ಠ ಎನಿಸಿಕೊಂಡಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್​ ಕೇಸ್​ಗಳ ಸಂಖ್ಯೆ 4,47,22,605ಕ್ಕೆ ತಲುಪಿದಂತಾಗಿದೆ.

ಅದಾಗ್ಯೂ ಸಕ್ರಿಯ ಪ್ರಕರಣಗಳ ಸಂಖ್ಯೆ 18,389 ಆಗಿದೆ. ಅಂದಹಾಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದಲ್ಲಿನ ಒಟ್ಟು ಸೋಂಕಿನ ಶೇ. 0.04 ಆಗಿದೆ. ಮತ್ತೊಂದೆಡೆ ಶೇ. 98.77 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net