

ನವದೆಹಲಿ: ದೇಶಾದ್ಯಂತ ಅನ್ಲಾಕ್-1 ಜಾರಿಯಾಗಿ, ಜನರ ಓಡಾಟ, ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದಿವೆ. ಹಾಗೇ ಕರೊನಾ ಪ್ರಸರಣವೂ ಹೆಚ್ಚುತಲೇ ಇದೆ.
ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 395,048ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ 14,516 ಹೊಸ ಕೊವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಇದು ಈವರೆಗಿನ ದಾಖಲೆಯ ಹೆಚ್ಚಳವಾಗಿದೆ ಎಂದು ಇಂದು ಆರೋಗ್ಯ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಪಾಕ್ ಡ್ರೋನ್ನ್ನು ಹೊಡೆದುರುಳಿಸಿದ ಬಿಎಸ್ಎಫ್ ಯೋಧರು
ಹಾಗೇ ಕಳೆದ 24 ಗಂಟೆಯಲ್ಲಿ 375 ಮಂದಿ ಕೊವಿಡ್-19ನಿಂದ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 12, 948ಕ್ಕೆ ಏರಿದೆ. ಒಟ್ಟು ಸೋಂಕಿತರ ಸಂಖ್ಯೆಯಲ್ಲಿ 1,68,269 ಸಕ್ರಿಯ ಕರೊನಾ ಪ್ರಕರಣಗಳಿದ್ದು, 2, 13, 831 ಮಂದಿ ಗುಣಮುಖರಾಗಿದ್ದಾರೆ. (ಏಜೆನ್ಸೀಸ್)