

ಬೆಂಗಳೂರು: ದೇಶಾದ್ಯಂತ ಖಾಲಿಯಿರುವ 30,041 ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್ ವೇಳಾಪಟ್ಟಿ-2, ಜುಲೈ 2023) ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದೆ. 10 ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಈ ನೇಮಕಾತಿ ನಡೆಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಮತ್ತು ಡಾಕ್ ಸೇವಕರಾಗಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಹುದ್ದೆಗೆ ಅನುಗುಣವಾಗಿ ಆರಂಭಿಕ ವೇತನ ರೂ.10,000 - ರೂ.12,000 ಇರುತ್ತದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 23 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ಕರ್ನಾಟಕದಲ್ಲಿ ಒಟ್ಟು 530 ಹುದ್ದೆಗಳು ಖಾಲಿಯಿವೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ದಿನಕ್ಕೆ ನಾಲ್ಕು ಗಂಟೆಗಳ ಕಾಲ ಕೆಲಸ ಮಾಡಬೇಕು. ಇದರ ಹೊರತಾಗಿ, ಭಾರತೀಯ ಅಂಚೆ ಪಾವತಿ ಬ್ಯಾಂಕ್‌ಗೆ ಸಂಬಂಧಿಸಿದ ಸೇವೆಗಳಿಗೆ BPM/ABPM/ಡಾಕ್ ಸೇವಕರಿಗೆ ಪ್ರೋತ್ಸಾಹವನ್ನು ನೀಡಲಾಗುತ್ತದೆ. ಅಂಚೆ ಇಲಾಖೆಯು ಅವರ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸಲು ಲ್ಯಾಪ್‌ಟಾಪ್ / ಕಂಪ್ಯೂಟರ್ / ಸ್ಮಾರ್ಟ್ ಫೋನ್ ಅನ್ನು ಒದಗಿಸುತ್ತದೆ. ಸೈಕ್ಲಿಂಗ್ ಬರಬೇಕು.
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ: 30,041
ಎಲ್ಲಿ ಎಷ್ಟು ಹುದ್ದೆಗಳು ಖಾಲಿಯಿವೆ?
ಕರ್ನಾಟಕ - 530
ಕೇರಳ - 1508
ಆಂಧ್ರ ಪ್ರದೇಶ - 1058
ತೆಲಂಗಾಣ - 961
ಅಸ್ಸಾಂ - 855
ಬಿಹಾರ - 2300
ಛತ್ತೀಸ್‌ಗಢ-721
ದೆಹಲಿ - 22
ಗುಜರಾತ್ - 1850
ಹರಿಯಾಣ - 215
ಹಿಮಾಚಲ ಪ್ರದೇಶ - 418
ಜಮ್ಮು ಮತ್ತು ಕಾಶ್ಮೀರ - 300
ಜಾರ್ಖಂಡ್- 530
ಮಧ್ಯಪ್ರದೇಶ - 1565
ಮಹಾರಾಷ್ಟ್ರ - 3154
ಈಶಾನ್ಯ - 500
ಒಡಿಶಾ - 1279
ಪಂಜಾಬ್ - 336
ರಾಜಸ್ಥಾನ - 2031
ತಮಿಳುನಾಡು- 2994
ಉತ್ತರ ಪ್ರದೇಶ - 3084
ಉತ್ತರಾಖಂಡ - 519
ಪಶ್ಚಿಮ ಬಂಗಾಳ - 2127
ವಿದ್ಯಾರ್ಹತೆ
10ನೇ ತರಗತಿ ಉತ್ತೀರ್ಣರಾಗಿರಬೇಕು. ಗಣಿತ, ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆ ಕಡ್ಡಾಯವಾಗಿದೆ. ಇದರರ್ಥ ಕರ್ನಾಟಕದ ವಿದ್ಯಾರ್ಥಿಗಳು 10 ನೇ ತರಗತಿಯವರೆಗೆ ಕನ್ನಡ ವಿಷಯವನ್ನು ಅಧ್ಯಯನ ಮಾಡಿರಬೇಕು. ಕಂಪ್ಯೂಟರ್ ಜ್ಞಾನದ ಜೊತೆಗೆ ಸೈಕ್ಲಿಂಗ್ ಕೂಡ ಬರಬೇಕು.
ವಯಸ್ಸಿನ ಮಿತಿ
16.02.2023 ರಂತೆ 18-40 ವರ್ಷಗಳ ನಡುವೆ ಇರಬೇಕು. ಗರಿಷ್ಠ ವಯೋಮಿತಿ ಸಡಿಲಿಕೆ SC ಮತ್ತು ST ಗಳಿಗೆ ಐದು ವರ್ಷ, OBCಗಳಿಗೆ ಮೂರು ವರ್ಷ ಮತ್ತು ಅಂಗವಿಕಲರಿಗೆ ಹತ್ತು ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ.
ಅರ್ಜಿ ಶುಲ್ಕ: SC, ST, ಅಂಗವಿಕಲರು, ಟ್ರಾನ್ಸ್ ಮಹಿಳೆಯರಿಗೆ ಯಾವುದೇ ಶುಲ್ಕ ಅನ್ವಯಿಸುವುದಿಲ್ಲ.
ಆಯ್ಕೆ ಪ್ರಕ್ರಿಯೆ: 10 ನೇ ತರಗತಿಯಲ್ಲಿ ಪಡೆದ ಅಂಕಗಳ ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಅಧಿಸೂಚನೆಯಲ್ಲಿ ಖಾಲಿ ಇರುವ ಶಾಖೆಗಳು, ಹುದ್ದೆ ಮತ್ತಿತರ ವಿವರಗಳನ್ನು ಉಲ್ಲೇಖಿಸಲಾಗಿದೆ. ಅಭ್ಯರ್ಥಿಗಳು ಅವುಗಳನ್ನು ಪರಿಶೀಲಿಸಿ ತಮ್ಮ ಆದ್ಯತೆಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ SMS/ಇಮೇಲ್/ಪೋಸ್ಟ್ ಮೂಲಕ ಮಾಹಿತಿಯನ್ನು ಕಳುಹಿಸಲಾಗುತ್ತದೆ.
ವೇತನ: ಬಿಪಿಎಂ ಹುದ್ದೆಗಳಿಗೆ ರೂ.12,000 - ರೂ.29,380, ಎಬಿಪಿಎಂ/ ಡಾಕ್ ಸೇವಕ್ ಹುದ್ದೆಗಳಿಗೆ ರೂ.10,000 - ರೂ.24,470.
ಅರ್ಜಿ ಸಲ್ಲಿಸುವ ವಿಧಾನ: ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು
* ಆನ್‌ಲೈನ್ ಅಪ್ಲಿಕೇಶನ್ ಪ್ರಾರಂಭ: 03.08.2023.
* ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ: 23.08.2023.
* ಅಪ್ಲಿಕೇಶನ್ ತಿದ್ದುಪಡಿಗಳಿಗೆ ಅವಕಾಶ: 24.08.2023 ರಿಂದ 26.08.2023.