ಮತ್ತೊಮ್ಮೆ ಮೋದಿ ಅತ್ಯಂತ ಜನಪ್ರಿಯ ಜಾಗತಿಕ ನಾಯಕ; ಹಾಗಾದ್ರೆ 2ನೇ ಸ್ಥಾನ ಯಾರಿಗೆ?

PM Modi
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹೌದು, ಮಾರ್ನಿಂಗ್ ಕನ್ಸಲ್ಟ್‌ನ ಸಮೀಕ್ಷೆಯ ಪ್ರಕಾರ, ಮೋದಿ ಅವರು ಶೇಕಡ 78 ಅನುಮೋದನೆ ರೇಟಿಂಗ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಹಾಗೆಯೇ ಮೆಕ್ಸಿಕನ್ ನಾಯಕ ಎರಡನೇ ಸ್ಥಾನದಲ್ಲಿದ್ದರೆ, ಯುಎಸ್ ಅಧ್ಯಕ್ಷ ಜೋ ಬೈಡನ್ ಹನ್ನೊಂದನೇ ಸ್ಥಾನದಲ್ಲಿದ್ದಾರೆ.

ವಿಶ್ವ ನಾಯಕರ ಅನುಮೋದನೆ ರೇಟಿಂಗ್‌ ವಿವರ ಇಲ್ಲಿದೆ...
ಮಾರ್ನಿಂಗ್ ಕನ್ಸಲ್ಟ್ ರೇಟಿಂಗ್ ಪ್ರಕಾರ, ಪಿಎಂ ಮೋದಿ 78% ರೇಟಿಂಗ್​​​​​​ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ಮೋದಿ ಅವರು 70% ಕ್ಕಿಂತ ಹೆಚ್ಚು ಅನುಮೋದನೆ ರೇಟಿಂಗ್‌ಗಳನ್ನು ಹೊಂದಿರುವ ಏಕೈಕ ನಾಯಕರಾಗಿದ್ದರೆ, ನಾಲ್ಕು ನಾಯಕರನ್ನು ಹೊರತುಪಡಿಸಿ ಉಳಿದವರೆಲ್ಲರೂ 50% ಕ್ಕಿಂತ ಕಡಿಮೆ ಅನುಮೋದನೆಯನ್ನು ಪಡೆದಿದ್ದಾರೆ.

ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಒಬ್ರಡಾರ್ 65% ಅನುಮೋದನೆ ರೇಟಿಂಗ್‌ಗಳೊಂದಿಗೆ ಎರಡನೇ ಜನಪ್ರಿಯ ನಾಯಕರಾಗಿದ್ದರೆ, ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ 63% ರೇಟಿಂಗ್‌ಗಳನ್ನು ಪಡೆದಿದ್ದಾರೆ. ಪೋಲೆಂಡ್‌ನ ಡೊನಾಲ್ಡ್ ಟಸ್ಕ್ 50% ರೇಟಿಂಗ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಸ್ವಿಟ್ಜರ್ಲೆಂಡ್ ಅಧ್ಯಕ್ಷ ವಿಯೋಲಾ ಅಮ್ಹೆರ್ಡ್ 51% ರೇಟಿಂಗ್ ಪಡೆದರು.

ಮಾರ್ನಿಂಗ್ ಕನ್ಸಲ್ಟ್‌ನ ಇತ್ತೀಚಿನ ಅನುಮೋದನೆ ರೇಟಿಂಗ್‌ಗಳು ಜನವರಿ 30 ಮತ್ತು ಫೆಬ್ರವರಿ 5 ರ ನಡುವೆ ಸಂಗ್ರಹಿಸಿದ ಡೇಟಾವನ್ನು ಆಧರಿಸಿವೆ. ಯುಎಸ್ ಮೂಲದ ಮಾರ್ನಿಂಗ್ ಕನ್ಸಲ್ಟ್ ಅತ್ಯಂತ ಹೆಸರಾಂತ ಸಮೀಕ್ಷೆ ಏಜೆನ್ಸಿಗಳಲ್ಲಿ ಒಂದಾಗಿದೆ.

ಯುಎಸ್ ಅಧ್ಯಕ್ಷ ಜೋ ಬೈಡೆನ್, ಯುಕೆ ಪ್ರಧಾನಿ ರಿಷಿ ಸುನಕ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಅತ್ಯಂತ ಶಕ್ತಿಶಾಲಿ ನಾಯಕರು ಎಂದು ಪರಿಗಣಿಸಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net