

ನವದೆಹಲಿ: ಭಾರತದಲ್ಲಿ ಕರೊನಾ ಸಾಂಕ್ರಾಮಿಕತೆಯಿಂದ ಸರ್ಕಾರ ಅಧಿಕೃತವಾಗಿ ಪ್ರಕಟಿಸಿರುವುದಕ್ಕಿಂತ ಹೆಚ್ಚುವರಿಯಾಗಿ 47 ಲಕ್ಷ ಜನರು ಮರಣಿಸಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿರುವುದು ಅಸಂಬದ್ಧ ಹಾಗೂ ಅಸಮರ್ಥನೀಯ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.
ಡಬ್ಲ್ಯುಎಚ್ಒ ಹೇಳಿದ್ದೇನು?
2020 ಜನವರಿ ಮತ್ತು 2021 ಡಿಸೆಂಬರ್ ನಡುವೆ ಭಾರತದಲ್ಲಿ 47 ಲಕ್ಷ ಹೆಚ್ಚುವರಿ ಕರೊನಾ ಸಾವು ಸಂಭವಿಸಿದೆ. ಇದು ಸರ್ಕಾರದ ಅಧಿಕೃತ ಮಾಹಿತಿಗಿಂತ ಹತ್ತು ಪಟ್ಟು ಹೆಚ್ಚು. ಭಾರತದ ಕೋವಿಡ್ ಸಾವು, ಸಾಂಕ್ರಾಮಿಕತೆಯಿಂದ ಜಗತ್ತಿನಾದ್ಯಂತ ಬಲಿಯಾದವರ ಒಟ್ಟು ಸಂಖ್ಯೆಯ ಮೂರನೇ ಒಂದರಷ್ಟಾಗುತ್ತದೆ ಎಂದು ಡಬ್ಲ್ಯುಎಚ್ಒ ಮಹಾ ನಿರ್ದೇಶಕ ಟೆಡ್ರೋಸ್ ಅಧಾನಂ ಘೇಬ್ರಿಯೆಸಸ್ ಗುರುವಾರ ಹೇಳಿದ್ದರು. ಜಗತ್ತಿನಾದ್ಯಂತ ಕೋವಿಡ್ಗೆ ಬಲಿಯಾದವರ ಸಂಖ್ಯೆ ಅಧಿಕೃತವಾಗಿ ಪ್ರಕಟಿಸಲಾದ 60 ಲಕ್ಷಕ್ಕೆ ಬದಲು 1.50 ಕೋಟಿ ಆಗಿದೆ ಎಂದೂ ಅಧಾನಂ ಹೇಳಿದ್ದರು.
ಸರ್ಕಾರದ ವಿವರಣೆ
2018ರಲ್ಲಿ ಸುಮಾರು ಶೇಕಡ 85&88ರಷ್ಟು ಸಾವುಗಳನ್ನು ಕವರ್ ಮಾಡಲಾಗಿದೆ. 2020ರಲ್ಲಿ ಅದು ಶೇ. 98&99 ಆಗಿತ್ತು. 2018 ಮತ್ತು 2019ರಲ್ಲಿ ಹೆಚ್ಚುವರಿಯಾಗಿ ಏಳು ಲಕ್ಷ ಸಾವುಗಳು ಸಂಭವಿಸಿವೆ. ಅವೆಲ್ಲವೂ ಕೋವಿಡ್ ಸಾವುಗಳು ಎಂದು ನಾವೇನಾದರೂ ಹೇಳಿದ್ದೇವೆಯೇ ಎಂಬುದು ಸರ್ಕಾರದ ಪ್ರಶ್ನೆ. ಹೆಚ್ಚುವರಿ 4.6 ಲಕ್ಷದಲ್ಲಿ 1.45 ಲಕ್ಷ ಸಾವುಗಳು ವರದಿಯಾಗಿರುವ ಸಾವುಗಳಾಗಿವೆ. ಮೂರು ಲಕ್ಷ ಸಾವುಗಳು ಇತರ ಕಾರಣಗಳಿಂದ ಸಂಭವಿಸಿದ್ದಾಗಿವೆ. ಒಂದು ವೇಳೆ ನಾವು 4 ಲಕ್ಷ ಮರಣಗಳು ಹೆಚ್ಚುವರಿ ಎಂದು ಹೇಳಿದರೂ ಅದು ಡಬ್ಲ್ಯುಎಚ್ಒದ ಅಂದಾಜಿಗೆ ಸರಿ ಹೊಂದುವುದಿಲ್ಲ ಎಂದು ಅರೋರಾ ವಿವರಿಸಿದ್ದಾರೆ.
ಡೇಟಾ ಹಾಗೂ ಬೇಟಾ
ರಾಹುಲ್ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿ ರುವ ಬಿಜೆಪಿ ವಕ್ತಾರ ಸಂಬಿತ್ ಮಹಾಪಾತ್ರ, "ಡಬ್ಲ್ಯು ಎಚ್ಒ ಡೇಟಾ ಹಾಗೂ ಕಾಂಗ್ರೆಸ್ "ಬೇಟಾ' ಇಬ್ಬರೂ ತಪು$್ಪ' ಎಂದು ವರ್ಣಿಸಿದ್ದಾರೆ.
ವಿಜ್ಞಾನ ಸುಳ್ಳು ಹೇಳದು
ಭಾರತದಲ್ಲಿ 47 ಲಕ್ಷ ಹೆಚ್ಚುವರಿ ಕೋವಿಡ್ ಮರಣ ಸಂಭವಿಸಿದೆ ಎಂಬ ಡಬ್ಲ್ಯುಎಚ್ಒ ಹೇಳಿಕೆಗೆ ಪೂರಕವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾದ ಮಾಡಿದ್ದಾರೆ. "ವಿಜ್ಞಾನ ಸುಳ್ಳು ಹೇಳುವುದಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಸುಳ್ಳಾಡುತ್ತಾರೆ' ಎಂದು ಎಂದು ಟ್ವೀಟ್ ಮಾಡಿದ್ದಾರೆ. ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡಿ ಸಂತ್ರಸ್ತ ನೆರವಿಗೆ ಧಾವಿಸುವಂತೆಯೂ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೂಸ್ಟರ್ ಡೋಸ್ ಬೇಗನೆ ಪಡೆಯಲು ಅನುಮತಿ
ವಿದೇಶಗಳಿಗೆ ತೆರಳುವ ಭಾರತೀಯರು ಆಯಾ ದೇಶಗಳ ಅಗತ್ಯಕ್ಕೆ ತಕ್ಕಂತೆ ಲಸಿಕೆಯ ಮುನ್ನೆಚ್ಚರಿಕೆ ಡೋಸ್ಅನ್ನು ಈಗಿರುವ ನಿಯಮವಾದ ಒಂಬತ್ತು ತಿಂಗಳಿಗಿಂತ ಮುಂಚೆಯೇ ಪಡೆಯಲು ಲಸಿಕೆ ಕುರಿತ ರಾಷ್ಟ್ರೀಯ ಸಲಹಾ ಗುಂಪು (ಎನ್ಟಿಎಜಿಐ) ಅನುಮತಿ ನೀಡಿದೆ. ಆದರೆ, ಒಟ್ಟಾರೆಯಾಗಿ ಎರಡನೇ ಹಾಗೂ ಬೂಸ್ಟರ್ ಡೋಸ್ ನಡುವಿನ ಅಂತರವನ್ನು ಒಂಬತ್ತು ತಿಂಗಳಿಂದ ಕಡಿಮೆ ಮಾಡಲು ಅದು ಶಿಾರಸು ಮಾಡಿಲ್ಲ. ಆರು ತಿಂಗಳಿಗೆ ಇಳಿಸುವ ಸಲಹೆ ಸರ್ಕಾರದ ಮುಂದಿದೆ.