30 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲೂ ಸಂಪೂರ್ಣ ಲಾಕ್​ಡೌನ್: ಜಗತ್ತಿನಾದ್ಯಂತ 14,510 ಕರೋನಾ ಕಂಟಕಕ್ಕೆ ಬಲಿಯಾದವರು, 3.33 ಲಕ್ಷ ಜನರಿಗೆ ಸೋಂಕು

janatha 23 mar 20
Published on

ನವದೆಹಲಿ: ಕರೊನಾ ವೈರಸ್​ನಿಂದಾಗಿ Covid19 ಸೋಂಕು ಜಗತ್ತಿನ 190 ರಾಷ್ಟ್ರಗಳಲ್ಲಿ ಹರಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಸೋಮವಾರ ತಡರಾತ್ರಿ 12 ಗಂಟೆಗೆ 14,510 ಜನ ಕರೊನಾ ಕಂಟಕಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಇದೇ ವೇಳೆ ಭಾರತದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, ಸೋಂಕು ಪೀಡಿತರ ಸಂಖ್ಯೆ 415ಕ್ಕೆ ಏರಿಕೆಯಾಗಿದೆ.

ಈ ನಡುವೆ, ಭಾರತದ 30 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಂದರೆ 548 ಜಿಲ್ಲೆಗಳಲ್ಲಿ ಕರೊನಾ ವೈರಸ್ ಸೋಂಕು ಹರಡದಂತೆ ಕ್ರಮಗಳನ್ನು ಕೈಗೊಂಡಿರುವ ಸರ್ಕಾರ ಸಂಪೂರ್ಣ ಲಾಕ್​ಡೌನ್​ಗೆ ಆದೇಶಿಸಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾಗಳಲ್ಲಿ ಇನ್ನೂ ಕೆಲವು ಕಡೆ ಲಾಕ್​ಡೌನ್ ಆದೇಶ ಜಾರಿಯಾಗಬೇಕಷ್ಟೆ. ಲಕ್ಷದ್ವೀಪದಲ್ಲಿ ಕೆಲವೊಂದು ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net