ಇರಾನ್​​ನಿಂದ ತನ್ನ ಪ್ರಜೆಗಳನ್ನು ಕರೆತರಲು 'ಆಪರೇಷನ್​​ ಸಿಂಧು' ಆರಂಭಿಸಿದ ಭಾರತ | Operation Sindu

dk - 2025-06-18T212659.215
Published on

Operation Sindu: ಇಸ್ರೇಲ್​- ಇರಾನ್​​ ನಡುವೆ ಆರು ದಿನಗಳಿಂದ ಸಂಘರ್ಷ ಭಾರೀ ಉಲ್ಬಣಗೊಳ್ಳುತ್ತಿದ್ದು, ದಿನೇದಿನೆ ಸಾವಿಜ ಸಂಖ್ಯೆಗಳು ಆಧಿಕವಾಗುತ್ತಿದೆ. ಸದ್ಯಕ್ಕೆ ಸಂಘರ್ಷ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ, ಇರಾನ್​ನಲ್ಲಿ ನೆಲೆಸಿರುವ ಭಾರತೀಯರನ್ನು ಕರೆ ತರುವ ಕಾರ್ಯಚರಣೆ ಆರಂಭಾವಾಗಿದ್ದು, ಅದಕ್ಕೆ ಆಪರೇಷನ್​​ ಸಿಂಧು ಎಂದು ನಾಮಕಾರಣ ಮಾಡಲಾಗಿದೆ.

110 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ವಿಮಾನ(ಆಪರೇಷನ್​​ ಸಿಂಧು) ಉತ್ತರ ಇರಾನ್‌ನಿಂದ ಯಶಸ್ವಿಯಾಗಿ ಸ್ಥಳಾಂತರಿಸಿ ಅರ್ಮೇನಿಯಾಗೆ ಸಾಗಿಸಲಾಗಿದೆ. ಜೂ.19ರ ಮುಂಜಾನೆ ವಿಮಾನವು ದೆಹಲಿಗೆ ಬರಲಿದೆ ಎಂದು ವಿದೇಶಾಂಗ ಸಚಿವಾಲಯ (MEA) ಮಂಗಳವಾರ ಪ್ರಕಟಿಸಿದೆ.

ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವ ಉದ್ದೇಶದಿಂದ ಭಾರತೀಯ ರಾಯಭಾರ ಕಚೇರಿಯು ಸಮುದಾಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಸಂಪರ್ಕಕ್ಕೆ ಕರೆ ಮಾಡಬಹುದು

ಇರಾನ್ ಮತ್ತು ಇಸ್ರೇಲ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಸಚಿವಾಲಯದಲ್ಲಿ 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ನಿಯಂತ್ರಣ ಕೊಠಡಿಯ ಸಂಪರ್ಕ ವಿವರಗಳು: 1800118797 (ಟೋಲ್-ಫ್ರೀ), +91-11-23012113, +91-11-23014104, +91-11-23017905, +91-9968291988 (ವಾಟ್ಸಾಪ್), situationroom@mea.gov.in.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net