

ನವದೆಹಲಿ: ಭಾರತ ಮತ್ತು ಇಸ್ರೇಲ್ನಲ್ಲಿ ಹೂಡಿಕೆಗಳನ್ನು ಉತ್ತೇಜಿಸಲು ಮತ್ತು ಹೂಡಿಕೆಯನ್ನು ರಕ್ಷಿಸುವ ಗುರಿಯೊಂದಿಗೆ ಎರಡೂ ದೇಶಗಳು ಸೋಮವಾರ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇಸ್ರೇಲ್ನ ರಾಜ್ಯ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಅವರು ಸಹಿ ಮಾಡಿರುವ ಒಪ್ಪಂದ ಎರಡೂ ದೇಶಗಳಲ್ಲಿ ಹೂಡಿಕೆಗಳನ್ನು ಹೆಚ್ಚಿಸಿ, ಹೂಡಿಕೆದಾರರಿಗೆ ಹೆಚ್ಚಿನ ಖಚಿತತೆ ಮತ್ತು ರಕ್ಷಣೆ ಒದಗಿಸಲಿದೆ.
ಈ ಒಪ್ಪಂದ ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಹೂಡಿಕೆಯ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತದೆ. ಪ್ರಸ್ತುತ ಉಭಯ ದೇಶಗಳ ನಡಚುವಿನ ಹೂಡಿಕೆ 800 ಮಿಲಿಯನ್ ಡಾಲರ್ (7000 ಕೋಟಿ ರೂ.) ಇದ್ದು, ಇದು ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ವ್ಯವಹಾರ ಮತ್ತು ಆರ್ಥಿಕತೆಗೆ ಪ್ರಯೋಜನವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಇಸ್ರೇಲ್ ಏಪ್ರಿಲ್ 2000ದಿಂದ ಜೂನ್ 2025ರವರೆಗೆ ವಿದೇಶ ನೇರ ಹೂಡಿಕೆ ಅಡಿಯಲ್ಲಿ 337.77 ಮಿಲಿಯನ್ ಡಾಲರ್ (3300 ಕೋಟಿ ರೂ.) ಹೂಡಿಕೆ ಮಾಡಿದೆ.