ಭಾರತ ಯಾವುದೇ ಪರಿಸ್ಥಿತಿಗೆ ಸಿದ್ಧವಾಗಿದೆ: ಪಾಕ್​ ಪರಮಾಣು ಪರೀಕ್ಷೆ ಬಗ್ಗೆ ರಾಜನಾಥ್ ಸಿಂಗ್ ಹೇಳಿದ್ದೇನು? Nuclear Test

Rajnath Singh
Published on

ನವದೆಹಲಿ: ಪಾಕಿಸ್ತಾನ ರಹಸ್ಯವಾಗಿ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷಿಸುತ್ತಿದೆ(Nuclear Test) ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತ ಯಾವುದೇ ರೀತಿಯ ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧವಾಗಿದೆ ಎಂದಿದ್ದಾರೆ.

ಈ ಬಗ್ಗೆ ಸದರ್ಶನವೊಂದರಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್, ಇಂತಹ ವರದಿಗಳಿಂದ ಭಾರತವು ಬೆಚ್ಚಿಬೀಳುವುದಿಲ್ಲ. ಅಲ್ಲದೆ, ಏನೇ ಆದರೂ, ಯಾವುದೇ ನಾವು ಯಾವುದೇ ರೀತಿಯ ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಮುಂದುವರೆದು ಮಾತನಾಡಿದ ಸಿಂಗ್​, ಪರಮಾಣು ಪರೀಕ್ಷೆಗಳನ್ನು ನಡೆಸಲು ಬಯಸುವ ದೇಶಗಳು ನೆಡೆಸಲಿ. ನಾವು ಯಾರನ್ನೂ ತಡೆಯಲು ಹೋಗುವುದಿಲ್ಲ. ಆದರೆ ಸಮಯ ಬಂದರೆ, ಭಾರತ ಯಾವುದೇ ಸವಾಲಿಗೆ ಪ್ರತಿಕ್ರಿಯಿಸಲು ಸಿದ್ಧವಾಗಿದೆ ಎಂದಿದ್ದಾರೆ. ಇಂತಹ ವರದಿಗಳಿಂದ ಭಾರತ ಹಿಂಜರಿಯುವುದಿಲ್ಲ. ಭಾರತದ ನೀತಿಯು ಸಂಯಮ ಮತ್ತು ಸಿದ್ಧತೆ ಎರಡನ್ನೂ ಆಧರಿಸಿದೆ. ಭಾರತವೂ ಪರೀಕ್ಷೆಗಳನ್ನು ನಡೆಸುತ್ತದೆಯೇ ಎಂದು ಕೇಳಿದಾಗ, ಪಾಕ್ ​ಪರೀಕ್ಷೆಗಳನ್ನು ನಡೆಸುತ್ತಾರೆಯೇ ಎಂದು ನೋಡೋಣ ಎಂದು ಸ್ಪಷ್ಟಪಡಿಸಿದ್ದಾರೆ.

ಪರಮಾಣು ಪರೀಕ್ಷೆ ಬಗ್ಗೆ ಟ್ರಂಪ್​ ಹೇಳಿದ್ದೇನು..?

ಪಾಕಿಸ್ತಾನ ರಹಸ್ಯವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಈ ಬಗ್ಗೆ ಸಿಬಿಎಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಟ್ರಂಪ್, ಪರಮಾಣು ಪರೀಕ್ಷೆಗಳನ್ನು ನಡೆಸುವ ದೇಶಗಳಿಗೆ ಪಾಕಿಸ್ತಾನವು ಒಂದು ಉದಾಹರಣೆಯಾಗಿದೆ. ನಾವು ಪರಮಾಣು ಪರೀಕ್ಷೆಗಳನ್ನು ಪುನರಾರಂಭಿಸುವ ಅಮೆರಿಕದ ಯೋಜನೆಗಳನ್ನು ಸಮರ್ಥಿಸಿಕೊಳ್ಳುವಾಗ ಈ ರೀತಿಯ ಹೇಳಿಕೆಗಳನ್ನು ನೀಡಿದ್ದರು.

ಅಮೆರಿಕದ ಆರೋಪಗಳಿಗೆ ಪಾಕ್​ ಸ್ಪಷ್ಟನೆ

ಈ ಆರೋಪಕ್ಕೆ ವಿದೇಶಾಂಗ ಸಚಿವಾಲಯ ತಕ್ಷಣ ಪ್ರತಿಕ್ರಿಯಿಸಿದ್ದು. ನಾವು ಏಕಪಕ್ಷೀಯ ಪರೀಕ್ಷಾ-ನಿಷೇಧ ನೀತಿಯನ್ನು ಕಾಯ್ದುಕೊಂಡಿದ್ದೇವೆ. ನಾವು ಹಿಂದೆಯೂ ಪರಮಾಣು ಪರೀಕ್ಷೆ ನಡೆಸಿಲ್ಲ ಅಥವಾ ಈಗಲೂ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಅದರೆ, ಪಾಕಿಸ್ತಾನದ ಪರಮಾಣು ಪರೀಕ್ಷೆಯು ಪಾರದರ್ಶಕವಾಗಿಲ್ಲ ಮತ್ತು ಚೀನಾ ಮತ್ತು ಉತ್ತರ ಕೊರಿಯಾದೊಂದಿಗಿನ ಅದರ ತಾಂತ್ರಿಕ ಸಹಕಾರವು ಬಹಳ ಹಿಂದಿನಿಂದಲೂ ಜಾಗತಿಕ ಕಳವಳಕ್ಕೆ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net