

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ಶತಶತಮಾನಗಳ ಹೋರಾಟ, ಕೋಟ್ಯಂತರ ಭಕ್ತರ ಕನಸು ಸಾಕಾರಕ್ಕೆ ಕೊನೆಗೂ ಶ್ರೀಕಾರ ಬಿದ್ದಿದೆ. ಭಾರತೀಯ ಸಂಸ್ಕೃತಿಯ ನೆಲೆಗಟ್ಟಾಗಿರುವ ಶ್ರೀರಾಮನ ಆದರ್ಶಗಳ ಜತೆಗೆ ದೇಶವಾಸಿಗಳ ನಂಬಿಕೆ, ಶ್ರದ್ಧೆಯನ್ನು ವಿಶ್ವಕ್ಕೆ ಸಾರುವ ಮಹಾಕಾರ್ಯ ರಾಮಮಂದಿರ ನಿರ್ವಣದ ಶಿಲಾನ್ಯಾಸ ಕಾರ್ಯಕ್ರಮದ ಮೂಲಕ ಯಶಸ್ವಿಯಾಗಿ ನೆರವೇರಿದೆ. ರಾಮಜನ್ಮಭೂಮಿಯಲ್ಲೇ ಮಂದಿರ ನಿರ್ವಿುಸುವ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ್ದ ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಮಾತಿನಂತೆ ಬುಧವಾರ ಭೂಮಿಪೂಜೆ ನೆರವೇರಿಸಿದರು. ಅದರೊಂದಿಗೆ ಮಹೋನ್ನತವಾದ ರಾಮಮಂದಿರ ಕಟ್ಟಡ ರೂಪದಲ್ಲಿ ಅವತರಿಸುವುದಷ್ಟೇ ಬಾಕಿ ಉಳಿದಂತಾಗಿದೆ. ಅಸಂಖ್ಯಾತ ರಾಮಭಕ್ತರ ಪಾಲಿಗೆ ಭವ್ಯವಾದ ದಿವ್ಯವಾದ ಮಂದಿರದಲ್ಲಿ ವಿರಾಜಮಾನ ಶ್ರೀರಾಮನನ್ನು ಕಣ್ತುಂಬಿಕೊಳ್ಳುವ ನಿರೀಕ್ಷೆ, ಕಾತರಗಳು ದುಪ್ಪಟ್ಟಾಗಿವೆ.
ಕರ್ನಾಟಕ ನಂಟು
ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕದ ನಂಟು ವಿಶೇಷವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಹಲವು ಬಾರಿ ರಾಜ್ಯದ ಹೆಸರು ಪ್ರಸ್ತಾಪವಾಯಿತು. ‘ಜಗನ್ನಾಥ ಪುರಿಯಿಂದ ಬದರಿನಾಥದವರೆಗೆ, ಕನ್ಯಾಕುಮಾರಿಯಿಂದ ಖೀರ್ ಭವಾನಿವರೆಗೆ, ಕೋಟೇಶ್ವರದಿಂದ ಕಾಮಾಕ್ಯದವರೆಗೆ, ಸೋಮನಾಥದಿಂದ ಕಾಶಿ ವಿಶ್ವನಾಥದವರೆಗೆ, ಲಕ್ಷದ್ವೀಪದಿಂದ ಲೇಹ್ವರೆಗೆ, ಸಮೇದ್ ಶಿಖರದಿಂದ ಶ್ರವಣಬೆಳಗೊಳದವರೆಗೆ ಇಡೀ ಭಾರತ ರಾಮಮಯವಾಗಿದೆ’ ಎಂದರು. ವಿವಿಧ ಭಾಷೆಗಳಲ್ಲಿ ರಾಮಾಯಣದ ರೂಪಾಂತರ ಹೆಸರಿಸುವ ಸಂದರ್ಭದಲ್ಲಿ ನಾಗಚಂದ್ರ ಬರೆದಿರುವ ಕನ್ನಡದ ಕುಮುದೇಂದು ರಾಮಾಯಾಣವನ್ನು ಮೋದಿ ಸ್ಮರಿಸಿದರು. ಬೆಂಗಳೂರಿನ ಶಿಲ್ಪಿ ರಾಮ ಮೂರ್ತಿ ಸಿದ್ಧಪಡಿಸಿರುವ ಕೋದಂಡ ರಾಮನ ಪ್ರತಿಮೆ ಯನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಕಾರ್ಯಕ್ರಮದ ವೇದಿಕೆಯಲ್ಲಿ ಮೋದಿಗೆ ಸ್ಮರಣಿಕೆಯಾಗಿ ನೀಡಿದರು. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಆದಿಚುಂಚನಗಿರಿ ನಿರ್ಮಲಾನಂದನಾಥ ಶ್ರೀಗಳು ಹಾಗೂ ಮಾದಾರ ಚೆನ್ನಯ್ಯ ಶ್ರೀಗಳು ಭಾಗವಹಿಸಿದ್ದರು.
ಪ್ರಧಾನಿಯವರ ದೂರದೃಷ್ಟಿ ಚಿಂತನೆಯಿಂದಾಗಿ ಇಂದು ಮಂದಿರದ ಕನಸು ನನಸಾಗುತ್ತಿದೆ. 5 ಶತಮಾನಗಳ ಹಿಂದಿನ ಸಂಕಲ್ಪ ಪ್ರಜಾಪ್ರಭುತ್ವದ ಮಾದರಿಯಲ್ಲೇ ಸಾಕಾರಗೊಳ್ಳುತ್ತಿದೆ. | ಯೋಗಿ ಆದಿತ್ಯನಾಥ ಉತ್ತರಪ್ರದೇಶ ಸಿಎಂ
ಮೋದಿ ಸಂಕಲ್ಪ
ಓರ್ವ ಮೋದಿ ಹಾಗೂ ಓರ್ವ ಯೋಗಿ ಇರುವಾಗ ದೇಗುಲ ನಿರ್ವಿುಸಲಾಗದಿದ್ದರೆ ಇನ್ನು ಯಾವಾಗ ಸಾಧ್ಯ? ಕೋಟ್ಯಂತರ ಭಕ್ತರ ಕನಸು ನನಸಾಗುವ ಕಾಲ ಬಂದಿದೆ. | ಮಹಾಂತ ನೃತ್ಯ ಗೋಪಾಲ್ ದಾಸ್ ರಾಮಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ
ಶಿಲಾನ್ಯಾಸದ ಕ್ಷಣ ಕ್ಷಣ
ರಾಮ ಮಂದಿರ ಶಿಲಾನ್ಯಾಸದಿಂದ ಭಾರತವನ್ನು ಆತ್ಮನಿರ್ಭರ ಗೊಳಿಸಲು ಆತ್ಮವಿಶ್ವಾಸ ಲಭ್ಯವಾಗಿದೆ. ಇಡೀ ವಿಶ್ವಕ್ಕೆ ಶಾಂತಿ ನೀಡಬಲ್ಲ ರಾಷ್ಟ್ರ ಭಾರತ. ಹಿಂದು ಧರ್ಮ ಎಲ್ಲರನ್ನೂ ಮುನ್ನೆಲೆಗೆ ತರುತ್ತದೆ. | ಮೋಹನ್ ಭಾಗವತ್ ಆರೆಸ್ಸೆಸ್ ಮುಖ್ಯಸ್ಥ
ಮೋದಿ ದಿನಚರಿ