ದೇಶದಲ್ಲಿ 9000 ಗಡಿ ದಾಟಿದ ಕರೊನಾ ಸೋಂಕಿತರ ಸಂಖ್ಯೆ; 24ಗಂಟೆಯಲ್ಲಿ 35 ಮಂದಿ ಸಾವು, ಇದುವರೆಗೆ 857 ಮಂದಿ ಆಸ್ಪತ್ರೆಯಿಂದ ಡಿಸ್​​ಚಾರ್ಜ್​

Coronavirus 21 march 20
Published on

ನವದೆಹಲಿ: ಭಾರತದಲ್ಲಿ ದಿನೇದಿನೆ ಕರೊನಾ ಪ್ರಮಾಣ ಏರುತ್ತಿದೆ. ಲಾಕ್​ಡೌನ್​ ಇದ್ದರೂ ನಿಯಂತ್ರಣವಾಗುತ್ತಿಲ್ಲ. ಇದೀಗ ಕರೊನಾ ಸೋಂಕಿತರ ಸಂಖ್ಯೆ 9000ದ ಗಡಿ ದಾಟಿದ್ದು 300ಜಕ್ಕೂ ಹೆಚ್ಚು ಸೋಂಕಿತರು ಮೃತಪಟ್ಟಿದ್ದಾರೆ. 857 ಮಂದಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 35 ಮಂದಿ ಕರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಲಾಕ್​ಡೌನ್​ ಅವಧಿ ನಾಳೆಗೆ ಮುಕ್ತಾಯವಾಗುತ್ತದೆ. ಆದರೆ ಪಂಜಾಬ್​, ಒಡಿಶಾ, ಕರ್ನಾಟಕಗಳೆಲ್ಲ ಏಪ್ರಿಲ್​ 30ರವರೆಗೆ ಲಾಕ್​ಡೌನ್​ ವಿಸ್ತರಣೆ ಮಾಡಿವೆ. ಇಡೀ ರಾಷ್ಟ್ರಮಟ್ಟದಲ್ಲಿ ಲಾಕ್​ಡೌನ್​ ವಿಸ್ತರಣೆಯಾಗುವ ಎಲ್ಲ ಸಾಧ್ಯತೆಗಳೂ ಇವೆ. (ಏಜೆನ್ಸೀಸ್)

ಕರೊನಾ ಸೋಂಕಿತರು:9,152 

ಮೃತಪಟ್ಟವರು: 308

ಡಿಸ್​ಚಾರ್ಜ್​: 857

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net