

ದೆಹಲಿ: ಲಡಾಖ್ನ ಡೆಪ್ಸಾಂಗ್ ಮತ್ತು ಡೆಮ್ಚೋಕ್ ಅಂತಾರಾಷ್ಟ್ರೀಯ ಗಡಿ ಬಳಿ ನಾಲ್ಕು ವರ್ಷಗಳಿಂದ ಹಾಕಲಾಗಿದ್ದ ಸೇನೆ ತುಕಡಿಗಳನ್ನು ಭಾರತ ಮತ್ತು ಚೀನಾ ವಾಪಸ್(India-China military withdraw) ಪಡೆದುಕೊಳ್ಳುವ ಪ್ರಕ್ರಿಯೆ ಇಂದು (ಅ.29) ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಸೇನಾ ವರದಿ ತಿಳಿಸಿದೆ.
ಎರಡು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಹಾಕಲಾಗಿದ್ದ ಶೆಡ್ ಮತ್ತು ಇನ್ನಿತರ ಚಟುವಟಿಕೆಗಳನ್ನು ಹಿಂದೆಗೆದುಕೊಳ್ಳುವ ಕಾರ್ಯ ಬಹುತೇಕ ಮುಗಿದಿದೆ. ಇದನ್ನು ಎರಡು ಕಡೆಗಳಲ್ಲಿ ಪೂರ್ಣ ಪ್ರಮಾಣದ ಪರಿಶೀಲನೆ ಕೂಡ ಮಾಡಲಾಗಿದೆ. ಕೆಲ ದಿನಗಳ ನಂತರ ಸಹಜ ಸ್ಥಿತಿಗೆ ತಲುಪಲಿದೆ.
ಚೀನಾ- ಭಾರತ ತಮ್ಮ ತಮ್ಮ ಸೇನಾ ತುಕಡಿಗಳನ್ನು ಹಿಂತೆಗೆದುಕೊಳ್ಳುವ ಕಾರ್ಯ ಮೊದಲನೇ ಹೆಜ್ಜೆಯಾಗಿದೆ.ಗಸ್ತು ನಡೆಸುವ ಪ್ರಕ್ರಿಯೆ ಅಂತಿಮವಾಗಿ, 2020ರ ಏಪ್ರಿಲ್ಗಿಂತ ಮುಂಚೆ ಇದ್ದ ಸ್ಥಿತಿಗೆ ಮರಳಲಿದೆ ಎಂದು ಇತ್ತಿಚೀಗೆ ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದರು.
ರಷ್ಯಾದ ಕಜಾನ್ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್, ಸೇನಾ ತುಕಡಿ ಹಿಂತೆಗೆತ ಸೇರೆದಂತೆ ಗಡಿಯಲ್ಲಿನ ಸಮಸ್ಯೆಗಳ ಇತ್ಯಾರ್ಥಕ್ಕೆ ಒಪ್ಪಂದ ಮಾಡಿಕೊಂಡಿದ್ದರು.ಈ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ಗಡಿಗಳಲ್ಲಿ ಬೀರುಸಿನ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
4 ವರ್ಷಗಳ ಹಿಂದೆ ಚೀನೀಯರ ಅತಿಕ್ರಮ
4 ವರ್ಷಗಳ ಹಿಂದೆ (2020 ರ ಏಪ್ರಿಲ್ ಬಳಿಕ) ಚೀನಾ ಸೇನಾ ತುಕಡಿಗಳು ಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶಗಳಲ್ಲಿ ಅತಿಕ್ರಮ ಮಾಡಿ, ಇದು ನಮ್ಮ ಪ್ರದೇಶ ಎಂದು ಭಾರತ ಸೇನಾದೊಂದಿಗೆ ಚಕಾಮಕಿ ನಡೆದಿತ್ತು. ಅಲ್ಲಿಂದ, ಎರಡು ದೇಶದ ಸಹಸ್ರ ಸೇನಾ ತುಕಡಿಗಳು ನೆಲೆಯೂರಿತ್ತು. ಹೀಗಾಗಿ, ಚೀನಾ ಮತ್ತು ಭಾರತ ನಡುವೆ ಅನಿಶ್ಚಿತ ಪರಿಸ್ಥಿತಿ ಮೂಡಿತ್ತು. ಈ ಆಡಚರಣೆಯಿಂದ ಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶಗಳಲ್ಲಿ ಭಾರತೀಯ ಸೇನಾ ಪಡೆಗಳು ಗಸ್ತು ತಿರುಗಲು ಭಾರಿ ಸಮಸ್ಯೆಯಾಗಿದೆ. ಸೇನಾ ವಾಪಸ್ ಪ್ರಕ್ರಿಯೆಯಿಂದ ಈ ಸಮಸ್ಯೆ ತಿಳಿಗೊಳ್ಳುವ ನಿರೀಕ್ಷೆ ಮೂಡಿದೆ.(ಏಜೆನೀಸ್)