ಭಾರತ- ಚೀನಾ ಸಂಘರ್ಷದ ವಿಡಿಯೋ; ಗಾಯಾಳು ಯೋಧನ ರಕ್ಷಣೆಗೆ ನಿಂತ ಜತೆಗಾರರು

video
Published on

ನವದೆಹಲಿ: ಭಾರತೀಯರ ಯೋಧರ ಮೇಲೆ ಚೀನಾ ಬರ್ಬರತೆಯನ್ನು ಮೆರೆದಿದೆ. ಪೀಪಲ್ಸ್​ ಲಿಬರೇಷನ್​ ಆರ್ಮಿಯ ಪೈಶಾಚಿಕ ಕೃತ್ಯಕ್ಕೆ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ.

ಈವರೆಗೆ ಘಟನೆ ನಡೆದ ಸ್ಥಳದ ಚಿತ್ರಗಳು ಬಿಡುಗಡೆಯಾಗಿರಲಿಲ್ಲ. ಆದರೆ, ಇದೀಗ ಯೋಧರೊಬ್ಬರು ಸೆರೆ ಹಿಡಿದಿದ್ದಾರೆನ್ನಲಾದ ವಿಡಿಯೋವೊಂದು ಭಾರಿ ವೈರಲ್​ ಆಗಿದೆ.

ದಾಳಿಯಲ್ಲಿ ಯೋಧನೊಬ್ಬ ನೆಲಕ್ಕೆ ಬಿದ್ದಿದ್ದು, ಆತನನ್ನು ರಕ್ಷಿಸಲು ಉಳಿದವರು ಗುಂಪಾಗಿದ್ದಾರೆ. ಇನ್ನುಳಿದವರಿ ಗಾಗಿ ಕೂಗುತ್ತಿದ್ದಾರೆ. ಹತ್ತಿರದಲ್ಲಿಯೇ ಮಿಲಿಟರಿ ವಾಹನವೊಂದು ನಿಂತಿದ್ದು, ಅದು ಯಾರಿಗೆ ಸೇರಿದ್ದು ಎನ್ನುವುದು ಖಚಿತವಾಗುತ್ತಿಲ್ಲ.

ವಿಡಿಯೋದಲ್ಲಿ ಸರೋವರ ಸ್ಪಷ್ಟವಾಗಿ ಕಾಣುತ್ತಿದ್ದು, ಗಾಲ್ವಾನ್​​ ಪ್ರದೇಶದ ಸರೋವರ ಎಂದು ಗೊತ್ತಾಗುತ್ತದೆ. ಇದೇ ಸರೋವರಕ್ಕೆ ಜಿಗಿದರೂ ಚೀನಿಯರು ಬಿಡದೇ ಭಾರತೀಯ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಸರೋವರದ ಅದರ ತೀರದಲ್ಲಿಯೇ ಯೋಧರು ನಿಂತಿದ್ದಾರೆ. ಸಹಾಯಕ್ಕಾಗಿ ಹಾಗೂ ಇನ್ನುಳಿದವರ ಬಗ್ಗೆ ವಿಚಾರಿಸಲು ಕೂಗುತ್ತಿರುವುದು ಎರಡೂವರೆ ನಿಮಿಷಗಳ ಈ ವಿಡಿಯೋದಲ್ಲಿದೆ.

ಈ ವಿಡಿಯೋ ಮೇ ತಿಂಗಳ ಮಧ್ಯದಲ್ಲಿ ನಡೆದ ಸಂಘರ್ಷದ್ದು ಎಂದು ಹೇಳಲಾಗಿದೆ. ಮೇಲಿನಿಂದ ಕಲ್ಲು ತೂರಾಟ ಶುರುವಾಗುತ್ತಿದ್ದಂತೆ ಪ್ರತಿ ದಾಳಿ ನಡೆಸುತ್ತಿರುವುದು ಇದರಲ್ಲಿದೆ.

ಇಲ್ಲಿದೆ ವಿಡಿಯೋ ಲಿಂಕ್​...............

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net