'ಕಾಶ್ಮೀರ ನಮ್ಮದು, ಸಮಯ ಬಂದಿದೆ' ಪಾರಿವಾಳದೊಂದಿಗೆ ಬಾಂಬ್ ಬೆದರಿಕೆ! ಜಮ್ಮುವಿನಲ್ಲಿ ಹೈ ಅಲರ್ಟ್.. pigeon

pigeon
Published on

pigeon : ಭಾರತ-ಪಾಕಿಸ್ತಾನ ಗಡಿಯ ಬಳಿಯ ಜಮ್ಮು ರೈಲು ನಿಲ್ದಾಣದಲ್ಲಿ ಅಧಿಕಾರಿಗಳು ಹೈ ಅಲರ್ಟ್ ಘೋಷಿಸಿದ್ದಾರೆ. ಜಮ್ಮು ಗಡಿ ಪ್ರದೇಶದಲ್ಲಿ ಪಾರಿವಾಳವೊಂದು ( pigeon ) ಆತಂಕಕಾರಿ ಸಂದೇಶ ಹೊತ್ತು ತಂದು ಭಯದ ವಾತಾವರಣ ಸೃಷ್ಟಿಸಿದೆ.

ಆರ್‌ಎಸ್ ಪುರದ ಖಟ್ಮರಿಯನ್ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ ಅಧಿಕಾರಿಗಳು ಪಾರಿವಾಳವನ್ನು ಹಿಡಿದಿದ್ದಾರೆ. ಅದರ ಕಾಲಿಗೆ ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಬರೆದಿರುವ ಬೆದರಿಕೆ ಸಂದೇಶವನ್ನು ಕಟ್ಟಲಾಗಿತ್ತು. 'ಕಾಶ್ಮೀರ ನಮ್ಮದು, ಸಮಯ ಬಂದಿದೆ' ಎಂದು ಉರ್ದು ಭಾಷೆಯಲ್ಲಿ ಮತ್ತು 'ಜಮ್ಮು ಸ್ಟೇಷನ್ ಇಐಡಿ ಬ್ಲಾಸ್ಟ್' ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ.

ರೈಲ್ವೆ ನಿಲ್ದಾಣ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಿತು. ಆಗಸ್ಟ್ 18 ರಂದು, ಬಿಎಸ್‌ಎಫ್‌ನ 07 ನೇ ಬೆಟಾಲಿಯನ್ ಅಡಿಯಲ್ಲಿ ಗಸ್ತು ತಂಡವು ಖಟ್ಮರಿಯಾ ಬಿಒಪಿ ಬಳಿ ಫಾರ್ವರ್ಡ್ ಡಿಫೆನ್ಸ್ ಪೋಸ್ಟ್ -69 ಬಳಿ ಅನುಮಾನಾಸ್ಪದ ಪಾರಿವಾಳವನ್ನು ಹಿಡಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net