14 ನ್ಯೂಸ್​ ಆ್ಯಂಕರ್​ಗಳನ್ನು ಬಹಿಷ್ಕರಿಸಿದ ಇಂಡಿಯಾ ಮೈತ್ರಿಕೂಟ: ಯಾರೆಲ್ಲ ಪಟ್ಟಿಯಲ್ಲಿದ್ದಾರೆ?

India Allaince
Published on

ನವದೆಹಲಿ: ಯುಪಿಎ ಅಂತಿದ್ದ ಮೈತ್ರಿ ಕೂಟವನ್ನು ಇಂಡಿಯಾ ಎಂದು ಬದಲಿಸಿಕೊಂಡಿರುವ ವಿಪಕ್ಷಗಳ ಒಕ್ಕೂಟ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಲು ಸಾಲು ಸಭೆಗಳನ್ನು ನಡೆಸುತ್ತಿದೆ. ಬುಧವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಕೆಲವು ಸುದ್ದಿ ನಿರೂಪಕರು ನಡೆಸುವ ಟಿವಿ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.

ಮಾಧ್ಯಮಕ್ಕೆ ಸಂಬಂಧಿಸಿದ ಅಧಿಕೃತ ಉಪಸಮಿತಿಯು ಕೆಲ ಸುದ್ದಿ ನಿರೂಪಕರನ್ನು ಪಟ್ಟಿಮಾಡಿಕೊಂಡು ಬಂದಿದ್ದು, ಅವರು ನಡೆಸುವ ಕಾರ್ಯಕ್ರಮಗಳಲ್ಲಿ ಪ್ಯಾನಲಿಸ್ಟ್‌ಗಳಾಗಿ ಭಾಗವಹಿಸುವುದನ್ನು ತಪ್ಪಿಸಲು ಸಮಿತಿಯಲ್ಲಿ ಒಕ್ಕೊರಲಾಗಿ ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್​​ನ ಪ್ರಧಾನಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ ಅವರು ತಿಳಿಸಿದ್ದಾರೆ.

ಪಟ್ಟಿಯಲ್ಲಿ ರಿಪಬ್ಲಿಕ್​ ಟಿವಿ ಅರ್ನಾಬ್​ ಗೋಸ್ವಾಮಿ, ಆಜ್​ತಕ್​ನ ಸುಧೀರ್​ ಚೌಧರಿ, ನ್ಯೂಸ್​ 18 ಹಿಂದಿಯ ಅಮಿಶ್​ ದೇವಗನ್​, ಟೈಮ್ಸ್​ ನೌನ ನವಿಕಾ ಕುಮಾರ್​ ಮತ್ತು ಇಂಡಿಯಾ ಟುಡೆ ಗ್ರೂಪ್​ನ ಗೌರವ್​ ಸಾವಂತ್​ ಸೇರಿದಂತೆ 14 ಆ್ಯಂಕರ್​ಗಳನ್ನು ಇಂಡಿಯಾ ಒಕ್ಕೂಟ ಬಹಿಷ್ಕರಿಸಿವೆ.

ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

1. ಅದಿತಿ ತ್ಯಾಗಿ

2. ಅಮನ್​ ಚೋಪ್ರ

3. ಅಮಿಶ್​ ದೇವಗನ್​

4. ಆನಂದ್​ ನರಸಿಂಹನ್​

5. ಅರ್ನಾಬ್​ ಗೋಸ್ವಾಮಿ

6. ಅಶೋಕ್​ ಶ್ರೀವಾತ್ಸವ್​

7. ಚೈತ್ರಾ ತ್ರಿಪಾಠಿ

8. ಗೌರವ್​ ಸಾವಂತ್​

9. ನವಿಕಾ ಕುಮಾರ್​

10. ಪ್ರಾಚಿ ಪರಾಶರ್​

11. ರುಬಿಕಾ ಲಿಯಾಖತ್

12. ಶಿವ್​ ಅರೂರ್​

13. ಸುಧೀರ್​ ಚೌಧರಿ

14. ಸುಶಾಂತ್​ ಸಿಹ್ನ

ಇಂಡಿಯಾ ಒಕ್ಕೂಟ ಸಾರ್ವಜನಿಕ ಅಭಿಪ್ರಾಯವನ್ನು ಸೆಳೆಯುವ ಗುರಿಯನ್ನು ಹೊಂದಿದೆ. ಆದರೆ, ಇದನ್ನು ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆಗಳ ಮೂಲಕ ಬಿಜೆಪಿಯು ವಶಪಡಿಸಿಕೊಳ್ಳುತ್ತಿದೆ ಎಂದು ವಿಪಕ್ಷಗಳ ಒಕ್ಕೂಟ ನಂಬಿದೆ. ಮಾಧ್ಯಮಗಳನ್ನು ಬಿಟ್ಟು ಸಾರ್ವಜನಿಕರನ್ನು ತಲುಪಲು ಸಾಮಾಜಿಕ ಮಾಧ್ಯಮ ಮತ್ತು ಸ್ವತಂತ್ರ ಪತ್ರಕರ್ತರನ್ನು ಇಂಡಿಯಾ ಬ್ಲಾಕ್​ ಅವಲಂಬಿಸಿದೆ.

ಪ್ರಚೋದನಕಾರಿ ಚರ್ಚೆಗಳನ್ನು ನಡೆಸುವ ಕೆಲವು ಆ್ಯಂಕರ್‌ಗಳಿದ್ದಾರೆ. ನಾವು ಅವರ ಪಟ್ಟಿಯನ್ನು ತಯಾರಿಸುತ್ತೇವೆ ಮತ್ತು ಇಂಡಿಯಾ ಮೈತ್ರಿ ಒಕ್ಕೂಟದ ವಕ್ತಾರರು ಅವರ ಕಾರ್ಯಕ್ರಮಗಳಿಗೆ ಹೋಗುವುದನ್ನು ನಿಲ್ಲಿಸಲಿದ್ದಾರೆ ಎಂದು ಎಎಪಿ ಸಂಸದ ರಾಘವ್​ ಚಡ್ಡಾ ಈ ಮೊದಲೇ ಹೇಳಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net