ಲಡಾಖ್​ನಲ್ಲಿ ಭಾರತ ಸೇನಾ ಬಲವೃದ್ಧಿ

Army
Published on

ನವದೆಹಲಿ: ಪೂರ್ವ ಲಡಾಖ್​ನ ಗಲ್ವಾನ್​ ಕಣಿವೆಯಲ್ಲಿ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಯೋಧರು ಅತಿಕ್ರಮಿಸಿ ಸಂರ್ಷಕ್ಕೆ ಇಳಿದ ಪರಿಣಾಮ ಭಾರತದ 20 ಯೋಧರು ಹುತಾತ್ಮರಾಗಿ ಜೂ.15ಕ್ಕೆ ಒಂದು ವರ್ಷ ಪೂರ್ಣವಾಗಿದೆ. ಹುತಾತ್ಮ ಯೋಧರಿಗೆ ದೇಶ ಗೌರವ ಸಲ್ಲಿಸಿದೆ. ಇದೇ ವೇಳೆ ಭಾರತೀಯ ಸೇನೆ ಈ ಭಾಗದಲ್ಲಿ ಸೇನಾ ಮೂಲಸೌಕರ್ಯ ಹೆಚ್ಚಿಸಿಕೊಂಡು, ಸೇನಾ ನಿಯೋಜನೆಯನ್ನು ಬಲಗೊಳಿಸಿದೆ.

ಏಪ್ರಿಲ್​ 9ರಂದು ಭಾರತ ಮತ್ತು ಚೀನಾದ ಉನ್ನತ ಸೇನಾ ಕಮಾಂಡರ್​ಗಳ ನಡುವೆ ನಡೆದ 11ನೇ ಸುತ್ತಿನ ಮಾತುಕತೆ ವೇಳೆ ನಾಲ್ಕು ವಿವಾದಿತ ಸ್ಥಾನಗಳಿಂದ ಹಿಂದೆ ಸರಿಯುವ ಅಂಶ ಪ್ರಸ್ತಾಪವಾಗಿತ್ತು. ಆದರೆ, ಹಾಟ್​ ಸಿಂಗ್ಸ್​ ಮತ್ತು ಗೋಗ್ರಾ ಪೋಸ್ಟ್​ನಿಂದ ಹಿಂದೆ ಸರಿಯಲು ಚೀನಾ ಒಪ್ಪಿಕೊಂಡಿಲ್ಲ. ಹಾಟ್​ ಸಿಂಗ್ಸ್​ ಸಮೀಪದ ಪ್ಯಾಟ್ರೋಲಿಂಗ್​ ಪಾಯಿಂಟ್​ 15 (ಪಿಪಿ15) ಮತ್ತು ಗೋಗ್ರಾ ಪೋಸ್ಟ್​ ಸಮೀಪದ ಪ್ಯಾಟ್ರೋಲಿಂಗ್​ ಪಾಯಿಂಟ್​ 17 (ಪಿಪಿ17ಎ) ಸದ್ಯ ಚೀನಾದ ಹಿಡಿತದಲ್ಲಿದೆ.

ಪೂರ್ವ ಲಡಾಖ್​ ಗಡಿಭಾಗದಲ್ಲಿ ಚೀನಾ ಸೇನೆ ಯಾವ ರೀತಿ ಸೈನ್ಯವನ್ನು ನಿಯೋಜಿಸಿದೆಯೋ ಅದೇ ರೀತಿ ಅದಕ್ಕೆ ಉತ್ತರವೆಂಬಂತೆ ಭಾರತವೂ ರಕ್ಷಣಾ ನಿಯೋಜನೆಯನ್ನು ಮಾಡಿಕೊಂಡಿದೆ. | ಜನರಲ್​ ಎಂಎಂ ನರವಣೆ ಸೇನಾ ಮುಖ್ಯಸ್ಥ

ಕಳೆದ ವರ್ಷ ಏನಾಗಿತ್ತು?
ಕಳೆದ ವರ್ಷ ಮೇ ತಿಂಗಳಲ್ಲಿ ಚೀನಾ ತನ್ನ ಸೇನೆಯನ್ನು ವಾರ್ಷಿಕ ತಾಲೀಮಿನ ವೇಳೆ ಪಿಪಿ 15, ಪಿಪಿ 17ಎ ಜತೆಗೆ ಗಲ್ವಾನ್​ನ ಪಿಪಿ14, ಪ್ಯಾಂಗಾಂಗ್​ ತ್ಸೋ ಸಮೀಪದ ಪಿಪಿ 17 (ಪಿಪಿ 17ಎಗೆ ಸಮೀಪದ ಪೋಸ್ಟ್​) ಎಂಬ ನಾಲ್ಕು ಪೋಸ್ಟ್​ನಲ್ಲಿ ಭಾರತೀಯ ಸೇನೆ ಜತೆಗೆ ಮುಖಾಮುಖಿ ಸಂರ್ಷಕ್ಕೆ ಇಳಿದಿತ್ತು. ಜೂನ್​ 20ರಂದು ಗಲ್ವಾನ್​ ಕಣಿವೆ ಸಮೀಪ ಪರಸ್ಪರ ಹೊಡೆದಾಟ ನಡೆದ ಕಾರಣ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು.

ಒಂದು ವರ್ಷದಲ್ಲಿ ಭಾರತದ ಭಾಗದಲ್ಲಾದ ಬದಲಾವಣೆ

  1. ಪೂರ್ವ ಲಡಾಖ್​ ಭಾಗದಲ್ಲಿ ಸೇನಾ ಮೂಲ ಸೌಕರ್ಯ ಹೆಚ್ಚಳ
  2. ಸೇನಾ ನಿಯೋಜನೆ 50,000 ಟ್ರೂಪ್​ನಿಂದ 60,000 ಟ್ರೂಪ್​ ತನಕ ಏರಿಕೆ
  3. ಕ್ಷಿಪ್ರವಾಗಿ ಸೇನಾ ಜಮಾವಣೆಗೆ ಉತ್ತಮ ರಸ್ತೆ ಮೂಲಸೌಕರ್ಯ ನಿರ್ಮಾಣ
  4. ಮೈನಸ್​ 40 ಡಿಗ್ರಿ ಸೆಲ್ಶಿಯಸ್​ ತಾಪಮಾನದಲ್ಲೂ ಸಮರ ಸನ್ನದ್ಧತೆ
  5. ಲಡಾಖ್​ನಲ್ಲಿ 50,000ಕ್ಕೂ ಹೆಚ್ಚು ಯೋಧರು ಹೈ ಅರ್ಲಟ್​

ಗಲ್ವಾನ್​ ಸಂರ್ಷದಲ್ಲಿ ಹತಾತ್ಮರಾದ ಕರ್ನಲ್​ ಸಂತೋಷ್​ ಬಾಬು ಪುತ್ಥಳಿ ತೆಲಂಗಾಣದ ಸೂರ್ಯಪೇಟ್​ಯಲ್ಲಿ ಮಂಗಳವಾರ
ಅನಾವರಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net