

ನವದೆಹಲಿ: ಭಾರತೀಯ ವಾಯುಸೇನೆಯು ಇಂದು 88ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಉತ್ತರ ಪ್ರದೇಶದ ಘಾಜಿಯಬಾದ್ನಲ್ಲಿರುವ ಹಿಂಡನ್ ವಾಯುನೆಲೆಯಲ್ಲಿ ವಿಶೇಷ ಪರೇಡ್ ನಡೆಯುತ್ತಿದ್ದು, ಭಾರತೀಯ ಯೋಧರು ತಮ್ಮ ಶಕ್ತಿ ಸಾಮರ್ಥ್ಯವನ್ನು ಪ್ರರ್ಶಿಸುತ್ತಿದ್ದಾರೆ. ಇಂದಿನ ಪ್ರಮುಖ ಆಕರ್ಷಣೆ ರಫೇಲ್ ಯುದ್ಧ ವಿಮಾನ ಆಗಿರಲಿದ್ದು, ರೋಮಾಂಚನಕಾರಿ ದೃಶ್ಯ ವೈಭವವನ್ನು ಮೇಲಿನ ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಮುಖ್ಯಸ್ಥರಾದ ಜನರಲ್ ಮನೋಜ್ ಮುಕುಂದ್ ನರಾವಣೆ ಮತ್ತು ನೌಕಾ ಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬಿರ್ ಸಿಂಗ್ ಅವರು ಭಾಗಿಯಾಗಿದ್ದಾರೆ. ಇದಕ್ಕೂ ಮುನ್ನ ವಾಯುಪಡೆಯ ಮುಖ್ಯಸ್ಥರಾದ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ವಾಯುಪಡೆ ದಿನದ ಮೆರವಣಿಗೆಯನ್ನು ಪರಿಶೀಲಿಸಿದರು.
ವಾಯುನೆಲೆಯ ಹಿನ್ನೆಲೆ
ಅಂದಹಾಗೆ 1932ರ ಅಕ್ಟೋಬರ್ 8ರಂದು ಬ್ರಿಟಿಷ್ ಆಡಳಿತದಲ್ಲಿ ವಾಯುಸೇನೆಯನ್ನು ಸ್ಥಾಪಿಸಲಾಯಿತು. 1933ರ ಏಪ್ರಿಲ್ನಲ್ಲಿ ಮೊದಲ ಸ್ಕಾ್ವಡ್ರನ್ ರೂಪುಗೊಂಡಿತು. ನಾಲ್ಕು ವೆಸ್ಟ್ಲ್ಯಾಂಡ್ ವಾಪಿಟಿ ಬೈಪ್ಲೇನ್ಗಳು ಹಾಗೂ ಐದು ಪೈಲಟ್ಗಳೊಂದಿಗೆ ಅಂದು ಕಾರ್ಯಾಚರಣೆ ಆರಂಭಿಸಿತು. ಅಂದು ಬ್ರಿಟಿಷ್ ಸರ್ಕಾರವತಿಯಿಂದ ಆರಂಭವಾದ ಭಾರತೀಯ ವಾಯಪಡೆ ಇಂದು ವಿಶ್ವದಲ್ಲೇ ನಾಲ್ಕನೇ ಅತ್ಯುತ್ತಮ ವಾಯುಸೇನೆಯಾಗಿ ಹೆಸರು ಪಡೆದಿದೆ. 1.4 ಲಕ್ಷಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1,700ಕ್ಕೂ ಅಧಿಕ ಏರ್ಕ್ರಾಫ್ಟ್ ಗಳಿವೆ.
ನೆರೆ ದೇಶಗಳಾದ ಚೀನಾ, ಪಾಕಿಸ್ತಾನದೊಂದಿಗೆ ನಾಲ್ಕು ಪ್ರಮುಖ ಯುದ್ಧಗಳು, ರಕ್ಷಣಾ ಕಾರ್ಯಾಚರಣೆಗಳಲ್ಲಿ ವಾಯಪಡೆ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ರಾಷ್ಟ್ರಪತಿ ಐಎಎಫ್ನ ಸುಪ್ರೀಂ ಕಮಾಂಡರ್ ಆಗಿದ್ದಾರೆ. ಚೀಫ್ ಆಫ್ ಏರ್ ಸ್ಟಾಫ್, ಏರ್ ಚೀಫ್ ಮಾರ್ಷಲ್ ವಾಯುಸೇನೆಯ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಐದು ಕಾರ್ಯಕಾರಿ ಕಮಾಂಡ್ಗಳು ಮತ್ತು ಎರಡು ಕ್ರಿಯಾತ್ಮಕ ಕಮಾಂಡ್ ಇದೆ. ರಷ್ಯಾ, ಫ್ರಾನ್ಸ್, ಬಾಂಗ್ಲಾದೇಶ, ಜಪಾನ್ ಸೇರಿ 20ಕ್ಕೂ ಹೆಚ್ಚು ದೇಶಗಳೊಂದಿಗೆ ರಕ್ಷಣಾ ಸಹಕಾರ ಒಪ್ಪಂದ ಮಾಡಿಕೊಳ್ಳಲಾಗಿದೆ.
2020ರ ವಿಶೇಷತೆ
ಪ್ರತಿ ವರ್ಷದಂತೆ ಈ ಅಕ್ಟೋಬರ್ 8ರಂದು ಗಾಜಿಯಾಬಾದ್ನ ಹಿಂಡನ್ ವಾಯುನೆಲೆಯಲ್ಲಿ ಭಾರತೀಯ ವಾಯುಸೇನೆ ದಿನಾಚರಣೆ ನಡೆಯುತ್ತಿದೆ. ಈ ವರ್ಷ ರಫೇಲ್ ಯುದ್ಧ ವಿಮಾನಗಳು ಪರೇಡ್ನ ಮುಖ್ಯ ಆಕರ್ಷಣೆಯಾಗಿದೆ. ಸುಕೋಯ್, ತೇಜಸ್, ಅಪಾಚೆ, ಮಿಗ್ ಸೇರಿ ಅನೇಕ ಯುದ್ಧ ವಿಮಾನಗಳು ಶಕ್ತಿ ಪ್ರದರ್ಶಿಸುತ್ತಿವೆ. ವಿಶೇಷ ಹೆಲಿಕಾಫ್ಟರ್ಗಳು ಸಾಹಸ ಪ್ರದರ್ಶಿಸುತ್ತಿವೆ. ಒಟ್ಟಾರೆ 56 ಏರ್ಕ್ರಾಫ್ಟ್ಗಳು, 19 ಫೈಟರ್ ಜೆಟ್ಗಳು, 19 ಹೆಲಿಕಾಫ್ಟರ್ಗಳು ಈ ವರ್ಷದ ಪರೇಡ್ನಲ್ಲಿ ಭಾಗಿಯಾಗಿವೆ.