ಸ್ವಾತಂತ್ರ‍್ಯೋತ್ಸವ ಸಿದ್ಧತೆ ಪರಿಶೀಲನೆ

web
Published on

ಧಾರವಾಡ: ಜಿಲ್ಲಾಡಳಿತದಿಂದ ಆ. 15ರಂದು ನಗರದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಚರಿಸಲಿರುವ 77ನೇ ಸ್ವಾತಂತ್ರ‍್ಯೋತ್ಸವ ದಿನಾಚರಣೆಯ ಸಿದ್ಧತೆಗಳನ್ನು ಜಿಲ್ಲಾಽಕಾರಿ ಗುರುದತ್ತ ಹೆಗಡೆ ಸೋಮವಾರ ಪರಿಶೀಲಿಸಿದರು.
ಗಣ್ಯರು, ಅತಿಥಿಗಳು, ಅಽಕಾರಿ, ಇಲಾಖಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸಬೇಕು. ಕುಡಿಯುವ ನೀರು, ಮೂಲ ಸೌಕರ್ಯಗಳ ಕೊರತೆ ಆಗದಂತೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಅಪರ ಜಿಲ್ಲಾಽಕಾರಿ ಗೀತಾ ಸಿ.ಡಿ., ಉಪ ಪೊಲೀಸ್ ಆಯುಕ್ತರಾದ ಡಾ. ಗೋಪಾಲ ಬ್ಯಾಕೋಡ, ರಾಜೀವ ಎಂ., ಉಪ ವಿಭಾಗಾಽಕಾರಿ ಅಶೋಕ ತೇಲಿ, ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಸರಶೆಟ್ಟಿ, ಪೊಲೀಸ್ ಇನ್ಸ್ಪೆಕ್ಟರ್ ಶಂಕರಗೌಡ ಪಾಟೀಲ, ಇತರರಿದ್ದರು.

  • ಸಚಿವ ಸಂತೋಷ ಲಾಡ್ ಧ್ವಜಾರೋಹಣ: ಸಚಿವ ಸಂತೋಷ ಲಾಡ್ ಅವರು ಬೆಳಗ್ಗೆ 9ಕ್ಕೆ ರಾಷ್ಟç ಧ್ವಜಾರೋಹಣ ನೆರವೇರಿಸುವರು. 9.25ಕ್ಕೆ ವಿವಿಧ ದಳಗಳಿಂದ ಗೌರವ ರಕ್ಷೆ ಸ್ವೀಕರಿಸುವರು. ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯಿಂದ ಪ್ರಕಟಿಸಿರುವ `ನುಡಿದಂತೆ ನಡೆದಿದ್ದೇವೆ' ಕಿರುಹೊತ್ತಿಗೆಯನ್ನು ಸಚಿವರು ಬಿಡುಗಡೆ ಮಾಡುವರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net