

ಬೆಂಗಳೂರು: ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ಭಾರತ ತಂಡ ನಾಲ್ಕನೇ ಬಾರಿಗೆ ವಿಶ್ವ ಕಪ್ನಲ್ಲಿ ಫೈನಲ್ಗೇರಿದೆ. ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾಗೆ ಎದುರಾಗಲಿದೆ. ಭಾರತದ ಪಾಲಿಗೆ ಇದು ವಿಶೇಷ ದಿನವಾಗಿದೆ.
ಟ್ರೋಫಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ಸೆಣಸಾಡಲಿವೆ. 2003ರ ವಿಶ್ವಕಪ್ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ತವಕದಲ್ಲಿದೆ. ಟೀಂ ಇಂಡಿಯಾ ಗೆಲ್ಲಲಿ ಎಂದು ದೇಶಾದ್ಯಂತ ಶುಭಾಷಯಗಳ ಸುರಿಮಳೆಯ ಹರಿದು ಬರುತ್ತಿದೆ. ಕ್ರಿಕೆಟ್ ಅಭಿಮಾನಿಗಳು ಹರಕೆ, ಪೂಜೆ ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಕ್ರಿಕೆಟ್ ಕಟ್ಟಾ ಅಭಿಮಾನಿ ಭಾರತ ಗೆದ್ದರೆ ಉಚಿತ ಬಿಯರ್ ನೀಡುವುದಾಗಿ ತಿಳಿಸಿದ್ದಾನೆ.
ಮೈಸೂರಿನಲ್ಲಿ ಭಾರತ ಗೆದ್ದರೆ ಉಚಿತ ಬಿಯರ್ ಆಫರ್ ನೀಡಲು ಮೈಸೂರಿನ ಪೆಗ್ಸ್ & ಕೆಗ್ಸ್ ಪಬ್ ಅಂಡ್ ರೆಸ್ಟೋರೆಂಟ್ ಮುಂದಾಗಿದೆ. ಮತ್ತೊಂದೆಡೆ ಮೈಸೂರಿನ ಕ್ರಿಕೆಟ್ ಅಭಿಮಾನಿಗಳು ವಿಘ್ನ ನಿವಾರಕ ವಿನಾಯಕನ ಮೊರೆ ಹೋಗಿದ್ದಾರೆ. ಫೈನಲ್ ಗೆದ್ದರೆ ಒಂದು ಮಗ್ ಬಿಯರ್ ಫ್ರೀ ನೀಡುವುದಾಗಿ ಘೋಷಿಸಿದೆ. ಫೈನಲ್ ಪಂದ್ಯ ನೋಡಲು ಮೂರು ಬಿಗ್ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ.