ದೇಶಾದ್ಯಂತ ಕರೊನಾ ವೈರಸ್​ ಸೋಂಕಿತರ ಸಂಖ್ಯೆ ಹೆಚ್ಚಳ

corona virus 10 mar 20
Published on

ನವದೆಹಲಿ: ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ 2069ಕ್ಕೆ ಏರಿದ್ದು, ಕಳೆದ ಎರಡೇ ದಿನಗಳಲ್ಲಿ ಈ ಸಂಖ್ಯೆ ಶೇ.50ರಷ್ಟು ಹೆಚ್ಚಾಗಿದೆ! ಕಳೆದ 48 ಗಂಟೆಗಳಿಗೆ ಹೋಲಿಸಿದರೆ ವೇಗದ ಗತಿಯಲ್ಲಿ ಸೋಂಕು ಹರಡುತ್ತಿದೆ ಎಂಬ ಆತಂಕಕಾರಿ ವರದಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿದೆ.

ಇದು ನಿನ್ನೆಯವರೆಗಿನ ಮಾಹಿತಿಯಾಗಿದ್ದು, ಈ ಸಂಖ್ಯೆ ಇನ್ನೂ ಅಧಿಕ ಆಗಿರುವ ಸಾಧ್ಯತೆ ಇದೆ. ಹೀಗೆಯೇ ಮುಂದುವರೆದರೆ ಇನ್ನು ಹತ್ತು ದಿನಗಳಲ್ಲಿ ಈ ಸಂಖ್ಯೆ 10 ಸಾವಿರದ ಗಡಿ ದಾಟಿದರೂ ಆಶ್ಚರ್ಯ ಇಲ್ಲ ಎಂದು ಸಚಿವಾಲಯ ವರದಿ ನೀಡಿದೆ.

ಈ ಪೈಕಿ ಕೇರಳ, ದೆಹಲಿ, ತಮಿಳನಾಡು ಮತ್ತು ರಾಜಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಹರಡಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಸೋಂಕು ವೇಗದಲ್ಲಿ ಪ್ರಸಾರವಾಗುತ್ತಿದೆ. ಜನರ ನಿರ್ಲಕ್ಷ್ಯ ಇದೇ ರೀತಿ ಮುಂದುವರೆದರೆ ಇನ್ನು ಕೆಲವೇ ತಿಂಗಳುಗಳಲ್ಲಿ ಆಸ್ಪತ್ರೆಗಳೆಲ್ಲಾ ಸೋಂಕಿತರಿಂದ ತುಂಬಿ ಹೋಗುವ ಸಾಧ್ಯತೆ ಇದೆ ಎಂದಿರುವ ಸಚಿವಾಲಯ, ಸದ್ಯ ಈ ವೈರಸ್‌ ಎಷ್ಟು ಸಮಯದಲ್ಲಿ ಸಂಪೂರ್ಣವಾಗಿ ನಿರ್ಮೂಲನವಾಗಲಿದೆ ಎಂದು ಈಗಲೇ ಹೇಳುವುದು ಕಷ್ಟಸಾಧ್ಯವಾಗಿದೆ ಎಂದಿದೆ.

ಮಹಾರಾಷ್ಟ್ರದಲ್ಲಿ 280 ಸೋಂಕಿತರು ಇದ್ದು ನಂ.1 ಸ್ಥಾನದಲ್ಲಿದ್ದರೆ ಎರಡನೆಯ ಸ್ಥಾನದಲ್ಲಿ ಕೇರಳ ಇದ್ದು, ಇಲ್ಲಿ ಸೋಂಕಿತರ ಸಂಖ್ಯೆ 238 ಇದೆ. ನಂತರ ಸ್ಥಾನದಲ್ಲಿ ತಮಿಳು ನಾಡು (227), ದೆಹಲಿ (207), ರಾಜಸ್ಥಾನ (105) ಇವೆ. ದೆಹಲಿ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸೋಂಕಿತರ ಪ್ರಮಾಣ ವೇಗದಲ್ಲಿ ಹೆಚ್ಚಾಗುತ್ತಿದೆ. ಮಣಿಪುರ, ಮಿಜೋರಾಮ್‌ ಮತ್ತು ಅಸ್ಸಾಂನಿಂದಲೂ ಹೊಸ ಸೋಂಕಿತರ ಮಾಹಿತಿ ಬಂದಿದ್ದು, ಸದ್ಯ ಈಶಾನ್ಯ ಭಾರತದಿಂದ ಯಾವುದೇ ವರದಿ ಬಂದಿಲ್ಲ.  ಜಗತ್ತಿನಾದ್ಯಂತ ಪ್ರತಿ ನಾಲ್ಕು ಗಂಟೆಗೊಮ್ಮೆ ಸೋಂಕಿತರ ಸಂಖ್ಯೆ ಇಮ್ಮಡಿಯಾಗುತ್ತಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net