

ಸೊರಬ: ದೈಹಿಕ, ಮಾನಸಿಕ ಸದೃಢತೆಗಾಗಿ ಕ್ರೀಡೆಗಳು ಸಹಕಾರಿ. ಮನುಷ್ಯನಲ್ಲಿ ಕ್ರೀಯಾಶೀಲತೆ ಹೆಚ್ಚಿಸಲು ನೆರವಾಗುತ್ತವೆ ಎಂದು ಸಮಾಜ ಸೇವಕ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.
ತಾಲೂಕಿನ ತಾವರೇಕೊಪ್ಪ ಗ್ರಾಮದ ರಾಮೇಶ್ವರ ಮೈದಾನದಲ್ಲಿ ಗ್ರಾಮದ ಶ್ರೀ ಸಿದ್ದೇಶ್ವರ ಕ್ರಿಕೆಟರ್ಸ್‌ನಿಂದ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಉತ್ಸಾಹಿ ಯುವಜನರು ಕ್ರೀಡಾಕೂಟ ಹಮ್ಮಿಕೊಂಡಿರುವುದು ಶ್ಲಾಘನೀಯ. ಸಮಾಜಮುಖಿ ಹಾಗೂ ಸಂಘಟನಾತ್ಮಕವಾಗಿ ಯುವಜನತೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಪ್ಪಗೌಡ, ಪ್ರಮುಖರಾದ ಸಂದೀಪ್ ಯಲವಳ್ಳಿ, ಹನುಮಂತಪ್ಪ, ರಾಜಶೇಖರಗೌಡ, ಧರ್ಮಪ್ಪ, ಶಿವಪ್ಪ ಶೇಟ್, ಚೈತನ್ಯ, ವೀರಪ್ಪಗೌಡ, ಶೇಖರಪ್ಪ, ಜಯಪ್ಪ, ಪ್ರಮೋದ್ ಗೌಡ, ಜಗದೀಶ್, ಮಹೇಂದ್ರ ಇತರರಿದ್ದರು.