ಪ್ರಯಾಣದ ಸಮಯ ಹೆಚ್ಚಿಸಿಕೊಳ್ಳಿ..! ಬೆಂ-ಮೈ ಎಕ್ಸ್‌ಪ್ರೆಸ್ ನಲ್ಲಿ 97 ಅಮೂಲ್ಯ ಜೀವ ರಕ್ಷಣೆ

alok kumar
Published on

ಬೆಂಗಳೂರು: ಸಾವು-ನೋವಿನ ರಹದಾರಿಯಾಗಿದ್ದ ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ರಸ್ತೆ ಅಪಘಾತಗಳು ದಿನೇ ದಿನೆ ನಿಯಂತ್ರಣಕ್ಕೆ ಬರುತ್ತಿವೆ. ಇದಕ್ಕೆ ವಾಹನಗಳ ವೇಗ ನಿಯಂತ್ರಣ ಮತ್ತು ಶಿಸ್ತುಪಥವೇ ಬಹುಮುಖ್ಯವಾಗಿದೆ.

2023ರಲ್ಲಿ ಆಗಸ್ಟ್ ಅಂತ್ಯಕ್ಕೆ 147 ಮಂದಿ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಅಪಘಾತಕ್ಕೆ ಬಲಿಯಾಗಿ ಆಗಿದ್ದರು. ಈ ವರ್ಷ ಆಗಸ್ಟ್ ಅಂತ್ಯಕ್ಕೆ 50 ಮಂದಿ ಸಾವನ್ನಪ್ಪಿದ್ದಾರೆ. ಅಂದರೇ 97 ಅಮೂಲ್ಯ ಜೀವಗಳು ಉಳಿದಿವೆ. ಆದರಿಂದ ಪ್ರಯಾಣದ ಸಮಯವನ್ನು 15 ನಿಮಿಷಗಳಷ್ಟು ಹೆಚ್ಚಿಸುವುದು ಒಳಿತು. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತೀ ವೇಗ ಮತ್ತು ವಿಚಲಿತ ಚಾಲನೆಯೇ ರಸ್ತೆ ಅಪಘಾತಕ್ಕೆ ಏಕೈಕ ಕಾರಣವಾಗಿದೆ ಎಂದು ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗ ಎಡಿಜಿಪಿ ಅಲೋಕ್‌ಕುಮಾರ್, ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಎಟಿಎಂಸಿ ತಂತ್ರಜ್ಞಾನ ಅಳವಡಿಸಿದ್ದು, ಶಿಸ್ತುಪಥ ಉಲ್ಲಂಘನೆ, ಅತೀ ವೇಗದ ಚಾಲನೆ ಮಾಡುವ ವಾಹನಗಳ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿ ಕೆಲವೇ ನಿಮಿಷಗಳಲ್ಲಿ ವಾಹನ ಮಾಲೀಕನ ಮೊಬೈಲ್‌ಗೆ ದಂಡ ವಿಧಿಸಿರುವ ಸಂದೇಶ ಹೋಗುತ್ತಿರುವುದು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿದೆ.

ಇತ್ತೀಚೆಗೆ ಎಕ್ಸ್‌ಪ್ರೆಸ್ ಹೈವೇಯಲ್ಲಿ 100 ಮತ್ತು 130 ಕಿ.ಮೀಟರ್‌ಗೆ ವೇಗ ನಿಯಂತ್ರಣದ ವಿರುದ್ಧ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ವೇಗಮಿತಿ ನಿಯಂತ್ರಣ ಮಾಡಿದ ಪ್ರತಿಲವಾಗಿ ರಸ್ತೆ ಅಪಘಾತಗಳು ನಿಯಂತ್ರಣಕ್ಕೆ ಬಂದಿರುವುದು ಪೊಲೀಸ್ ಇಲಾಖೆ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

ಅಪಘಾತದಲ್ಲಿ ಸಾವಿನ ಅಂಕಿ-ಅಂಶ

ತಿಂಗಳು     2023      2024 ಜನವರಿ      14           12 ಫೆಬ್ರವರಿ     17           6 ಮಾರ್ಚ್    20           9 ಏಪ್ರಿಲ್      20           3 ಮೇ           29           3 ಜೂನ್       27           9 ಜುಲೈ       10            6 ಆಗಸ್ಟ್      10            2 ಒಟ್ಟು       147          50

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net