

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಕಿತರ ಸಂಖ್ಯೆ ಇಂದು ಮತ್ತೆ 6 ಸಾವಿರದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ ಸೋಂಕಿಗೆ ಒಳಗಾದವರು 6,257. ನಿನ್ನೆ ಈ ಸಂಖ್ಯೆ 4,267 ಆಗಿತ್ತು. ಆದರೆ, ಸಂತೋಷದ ಸಂಗತಿ ಎಂದರೆ ಇಂದೂ ಕೂಡ ಸೋಂಕಿಗೆ ಒಳಗಾದವರಿಗಿಂತ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆಯೇ ಹೆಚ್ಚಾಗಿದೆ.
ಕೋವಿಡ್ನಿಂದ ಗುಣವಾದವರ ಸಂಖ್ಯೆ ನಿನ್ನೆ 5,218 ಆಗಿದ್ದರೆ, ಇಂದು ಬರೋಬ್ಬರಿ 6,473 ಮಂದಿ ಚೇತರಿಕೆ ಕಂಡಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,88,611 ತಲುಪಿದ್ದರೆ, ಚೇತರಿಕೆ ಕಂಡವರ ಸಂಖ್ಯೆ ಒಂದು ಲಕ್ಷ ದಾಟಿ 1,05,599 ಆಗಿದೆ. ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ ನಿನ್ನೆಯ 79,908ರಿಂದ ಇಂದು 79,606ಕ್ಕೆ ಇಳಿದಿದೆ.
ನಿನ್ನೆಗೆ ಹೋಲಿಸಿದಲ್ಲಿ ಸಾವಿನ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ನಿನ್ನೆ 114 ಜನರು ಮೃತಪಟ್ಟಿದ್ದರೆ, ಇಂದು ಈ ಸಂಖ್ಯೆ 86ಕ್ಕೆ ಕುಸಿದಿದೆ. ಕೋವಿಡ್ನಿಂದ ಮೃತಪಟ್ಟವರ ಒಟ್ಟಾರೆ ಸಂಖ್ಯೆ 3,398ಕ್ಕೆ ಹೆಚ್ಚಳವಾಗಿದೆ. ಗಂಭೀರ ಸ್ಥಿತಿಯಲ್ಲಿದ್ದು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 699.
ರಾಜಧಾನಿಯಲ್ಲಿ ಕೋವಿಡ್ ಸಂಖ್ಯೆಯಲ್ಲಿ ನಿನ್ನೆಗೆ ಹೋಲಿಸಿದಲ್ಲಿ ಕೊಂಚ ಏರಿಕೆಯಾಗಿದೆ. ನಿನ್ನೆ ಸೋಂಕಿತರ ಸಂಖ್ಯೆ 1,243 ಆಗಿದ್ದರೆ, ಇಂದು 1,610ಕ್ಕೆ ಏರಿಕೆಯಾಗಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 77,038 ಆಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 1,508 ಆಗಿದೆ. ಒಟ್ಟಾರೆ ಗುಣವಾದವರ ಸಂಖ್ಯೆ 42,674. ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು ಕಳೆದ 24 ತಾಸುಗಳಲ್ಲಿ 17 ಜನರು ಮೃತಪಟ್ಟಿದ್ದಾರೆ. ಒಟ್ಟು ಸಾವಿಗೀಡಾದವರು ಸಂಖ್ಯೆ 1,293ಕ್ಕೆ ಏರಿದೆ.
ಜಿಲ್ಲಾವಾರು ಕೋವಿಡ್ ಅಂಕಿ-ಅಂಶ ಇಲ್ಲಿದೆ